ಉಡುಪಿ,ಅ. 09 (DaijiworldNews/AK): ಕಾಪು ತಾಲೂಕು ಬೆಳಪು ಗ್ರಾಮದ ಇಂಡಸ್ಟ್ರಿಯಲ್ ಏರಿಯಾ ಕ್ರಾಸ್ ರಸ್ತೆ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಆರೋಪಿಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಅಭಿಷೇಕ್ ಪಾಲನ್(30 ವರ್ಷ ), ಆರ್.ಶಾಶ್ವತ್(24 ವರ್ಷ) ಎಂದು ಗುರುತಿಸಲಾಗಿದೆ. ಬೆಳಪು ಇಂಡಸ್ಟ್ರಿಯಲ್ ಏರಿಯಾ ಕ್ರಾಸ್ ರಸ್ತೆ ಬಳಿ ಗಾಂಜಾ ಮಾರಾಟ ಮಾಡುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಶಿರ್ವ ಪೊಲೀಸ್ ಠಾಣಾ ಉಪನಿರೀಕ್ಷಕರು ಹಾಗೂ ಠಾಣಾ ಸಿಬ್ಬಂದಿಯವರು ದಾಳಿ ಮಾಡಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಆರೋಪಿಗಳನ್ನು ಬಂದಿಸಿದ್ದಾರೆ.
ಸುಮಾರು 115.44 ಗ್ರಾಂ ಗಾಂಜಾ(ಅಂದಾಜು ಮೌಲ್ಯ 5,000/-), ತೂಕದ ಡಿಜಿಟಲ್ ಯಂತ್ರ(ಅಂದಾಜು ಮೌಲ್ಯ 200/-), ಪ್ಲಾಸ್ಟಿಕ್ ಡಬ್ಬ-1(ಅಂದಾಜು ಮೌಲ್ಯ 50/-), ಸ್ಥಳದಲ್ಲಿದ್ದ ಮೋಟಾರ್ ಸೈಕಲನ್ನು(ಅಂದಾಜು ಮೌಲ್ಯ 70,000/-) ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.