ಉಡುಪಿ, ಅ. 09(DaijiworldNews/ TA): ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಸುಮಾರು 9 ಕೆಜಿ 937 ಗ್ರಾಂ 209 ಮಿಲಿಗ್ರಾಂ ತೂಕದ ಅಂದಾಜು ಮೌಲ್ಯ ರೂಪಾಯಿ 7,12,963/- ಬೆಲೆಯ ಗಾಂಜಾ, 345 ಗ್ರಾಂ 596 ಮಿಲಿಗ್ರಾಂ ಎಂ.ಡಿ.ಎಂ.ಎ. ಅಂದಾಜು ಮೌಲ್ಯ ರೂಪಾಯಿ 8,08,464/- ಹಾಗೂ ಮೌಲ್ಯರಹಿತ 61 ಗ್ರಾಂ 430 ಮಿಲಿಗ್ರಾಂ ಬಿಳಿ ಪೌಡರ್ನ್ನು ಪಡುಬಿದ್ರಿ ಠಾಣಾ ಸರಹದ್ದಿನ ಮೆ. ಆಯುಷ್ ಎನ್ವಿರೋಟೆಕ್ ಪ್ರೈ. ಲಿ., ಪಡುಬಿದ್ರಿ ಎಂಬಲ್ಲಿ ನಾಶಪಡಿಸಲಾಯಿತು. ನಾಶಪಡಿಸಿದ ಮಾದಕ ದ್ರವ್ಯದ ಒಟ್ಟು ಅಂದಾಜು ಮೌಲ್ಯ 15,21,427 ಎಂದು ಪೊಲೀಸರು ತಿಳಿಸಿದ್ದಾರೆ.






ಉಡುಪಿ ನಗರ ಠಾಣೆಯಲ್ಲಿ 03 ಪ್ರಕರಣ, ಸೆನ್ ಠಾಣೆಯಲ್ಲಿ 2 ಪ್ರಕರಣಗಳು, ಮಲ್ಪೆ ಹಾಗೂ ಪಡುಬಿದ್ರಿ, ಶಿರ್ವಾ, ಕಾರ್ಕಳ ನಗರ ಹಾಗೂ ಮಣಿಪಾಲ ಠಾಣೆಯ ತಲಾ 01 ಪ್ರಕರಣ ಸೇರಿ ಒಟ್ಟು 10 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾದಕ ದ್ರವ್ಯ ಪದಾರ್ಥಗಳು ಇದರಲ್ಲಿ ಸೇರಿವೆ.
ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷ ಹರಿರಾಮ್ ಶಂಕರ್, ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿ ಸದಸ್ಯರು ಹಾಗೂ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷಾ ಪ್ರಿಯಂವದಾ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಹಾಗೂ ಸದಸ್ಯರಾದ ಪ್ರಭು ಡಿ.ಟಿ. ಮತ್ತಿತರ ಅಧಿಕಾರಿಗಳು ಭಾಗಿಯಾದರು.