ಮಂಗಳೂರು, ಅ. 08 (DaijiworldNews/TA): ಮೊಬೈಲ್ ಮನೆಯಲ್ಲಿ ಬಿಟ್ಟು ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಹಾಸನ ಅರಸೀಕೆರೆ ಮೂಲದ ದೇವರಾಜ್ (49) ಎಂದು ಗುರುತಿಸಲಾಗಿದೆ.

ಇವರು ಪಂಪ್ ವೆಲ್ ಸಮೀಪದ ಎಕ್ಕೂರಿನಲ್ಲಿ ವಾಸವಿದ್ದು, ಮನೆಯಲ್ಲಿ ಮೊಬೈಲ್ ಬಿಟ್ಟು ಸೆಪ್ಟೆಂಬರ್ 25ರಿಂದ ನಾಪತ್ತೆಯಾಗಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.