ಸುಳ್ಯ, ಅ. 07 (DaijiworldNews/AA): ರಿಪಾಟ್ರಿಯೇಟ್ ವೆಲ್ವೇರ್ ಟ್ರಸ್ಟ್ ಚೆನ್ನೈ ಹಾಗೂ ಸುಳ್ಯ ರಿಪಾಟ್ರಿಯೇಟ್ ವೆಲ್ವೇರ್ ಟ್ರಸ್ಟ್ ವತಿಯಿಂದ ತಮಿಳು ಬಾಂಧವರ ವಿದ್ಯಾರ್ಥಿ ಸಮಾವೇಶ ಅಕ್ಟೋಬರ್ 12 ರಂದು ಸುಳ್ಯ ಪರಿವಾರಕಾನದ ಜಾನಕಿ ವೆಂಕಟ್ರಮಣ ಸಭಾಭವನದಲ್ಲಿ ನಡೆಯಲಿದೆ ಎಂದು ರಿಪಾಟ್ರಿಯೇಟ್ ವೆಲ್ವೇರ್ ಟ್ರಸ್ಟ್ ನ ಟ್ರಸ್ಟಿ ಶಿವಕುಮಾರ್. ಎಸ್. ತಿಳಿಸಿದರು.

ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆನ್ನೈ ರೆಸ್ಕೋ ಬ್ಯಾಂಕ್ ಅಧ್ಯಕ್ಷ ಇ. ಸಂದಾನಂ ವಹಿಸಲಿದ್ದಾರೆ. ವಿಶೇಷ ಅಭ್ಯಾಗತರಾಗಿ ಚೆನ್ನೈನ ರೆಪ್ಪೋ ಹೋಮ್ ಫೈನಾನ್ಸ್ ಇದರ ಅಧ್ಯಕ್ಷ ಸಿ. ತಂಗರಾಜು ಭಾಗವಹಿಸಲಿದ್ದಾರೆ. ಕಾಸರಗೋಡು ಜಿಲ್ಲಾಧಿಕಾರಿ ಇನ್ನಶೇಖರ್.ಕೆ ದಿಕ್ಕೂಚಿ ಭಾಷಣ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ, ಹಿರಿಯ ಕಾರ್ಮಿಕ ಮುಖಂಡ ಸುಬ್ಬಯ್ಯ ಬೇಂಗಮಲೆ ಇತರರು ಭಾಗವಹಿಸಲಿದ್ದಾರೆ ಎಂದರು.