ಮಂಗಳೂರು, ಅ. 05 (DaijiworldNews/TA): ದಸರಾ ಈ ಭಾರಿ ವೈಭವಕ್ಕೆ ಸಾಕ್ಷಿಯಾಗಿತ್ತು. ಸಾಲು ಗಟ್ಟಿದ ಟ್ಯಾಬ್ಲೋ ಕಣ್ಮನ ಸೆಳೆದರೆ, ಪದುವಾ ಫ್ರೆಂಡ್ಸ್ ಕ್ಲಬ್ ರಿಜಿಸ್ಟರ್ ತಂಡದಿಂದ 11ನೇ ವರ್ಷದ ಕಲಾಕಾಣಿಕೆಯಾಗಿ ಪುರಿ ಜಗನ್ನಾಥ ದೇಗುಲದ ಸ್ತಬ್ಧಚಿತ್ರವು ಪ್ರಮುಖ ಆಕರ್ಷಣೆಯಾಗಿ ಮೂಡಿ ಬಂತು. ಪ್ರತಿವರ್ಷದಂತೆ ಈ ಬಾರಿಯೂ ವಿಭಿನ್ನ ರೀತಿಯ ಟ್ಯಾಬ್ಲೋ ಮೂಲಕ ನೆರೆದವರ ಕಣ್ಮನ ಸೆಳೆಯಿತು.

ಒಡಿಶಾದ ಪುರಿ ಜಗನ್ನಾಥ ದೇವಾಲಯವು ತನ್ನ ವಿಶಿಷ್ಟ ವಾಸ್ತುಶಿಲ್ಪಕ್ಕೆ ಜಗದ್ವಿಖ್ಯಾತಿಯನ್ನು ಪಡೆದಿದೆ. ಗಾಳಿ ಬೀಸುವ ವಿರುದ್ಧ ದಿಕ್ಕಿಗೆ ಬಾವುಟ ಹಾರಾಡುವುದು ಇಲ್ಲಿನ ವಿಶೇಷವಾಗಿದೆ. ಈ ಹಿನ್ನೆಲೆಯನ್ನಿಟ್ಟುಕೊಂಡು ಮಂಗಳೂರು ದಸರಾದಲ್ಲಿ ಪುರಿ ಜಗನ್ನಾಥ್ ದೇವಾಲಯದ ಸ್ತಬ್ಧಚಿತ್ರವನ್ನು ಮಂಗಳೂರಿನ ನಂತೂರಿನ ಪದುವಾ ಫ್ರೆಂಡ್ಸ್ ಕ್ಲಬ್ ಪ್ರದರ್ಶಿಸಿತು. ಟ್ಯಾಬ್ಲೋದ ವೈಭವಕ್ಕೆ ಪುಳಕಿತರಾದ ಸಾವಿರಾರು ಮಂದಿ ಮೊಬೈಲ್ನಲ್ಲಿ ಪೋಟೋ ಕ್ಲಿಕಿಸಿ ಸಂಭ್ರಮಿಸಿದ್ರು. ಈ ಸಂದರ್ಭ ಕ್ಲಬ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.