ಉಡುಪಿ, ಅ. 04 (DaijiworldNews/TA): ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣದ ನಾಲ್ಕನೇ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ನಾಲ್ಕನೇ ಆರೋಪಿಯನ್ನು ಪ್ರಕರಣದ ಮೊದಲ ಆರೋಪಿ ಫೈಜಲ್ ಖಾನ್ ಅವರ ಪತ್ನಿ ರಿಧಾ ಶಬಾನಾ (27) ಎಂಬುವುದಾಗಿ ಗುರುತಿಸಲಾಗಿದೆ. ಅವರು ಹತ್ಯೆಯ ಯೋಜನೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ.
ಇದಕ್ಕೂ ಮೊದಲು, ಪ್ರಕರಣದ ವಿಚಾರವಾಗಿ ಸೈಫುದ್ದೀನ್ನ ಮೂವರು ಸ್ನೇಹಿತರಾದ ಫೈಜಲ್ ಖಾನ್, ಶುಕೂರ್ ಮತ್ತು ಶರೀಫ್ ಅವರನ್ನು ಬಂಧಿಸಲಾಗಿತ್ತು.