ಬೆಳ್ತಂಗಡಿ, ಅ. 04 (DaijiworldNews/TA): ತಾಲೂಕಿನ ಗುರುವಾಯನಕೆರೆ- ಕಾರ್ಕಳ ರಸ್ತೆಯ ಅಳದಂಗಡಿಯಲ್ಲಿ ಹೆದ್ದಾರಿ ದಾಟುತ್ತಿದ್ದ ಮಹಿಳೆಗೆ ಅಪಘಾತವಾಗುವುದನ್ನು ತಪ್ಪಿಸಲು ಹೋಗಿ ಟೆಂಪೋ ಟ್ರಾವೆಲರ್ ವಾಹನವೊಂದು ಪಲ್ಟಿಯಾದ ಘಟನೆ ನಡೆದಿದೆ.

ಮಹಿಳೆ ರಸ್ತೆ ದಾಟುತ್ತಿದ್ದ ವೇಳೆ ಟಿಟಿ ವಾಹನ ವೇಗವಾಗಿ ಬಂದಿದ್ದು, ಈ ವೇಳೆ ಮಹಿಳೆ ಢಿಕ್ಕಿಯಾಗುತ್ತದೆ ಎಂದು ಚಾಲಕ ವಾಹನವನ್ನು ಬಲಕ್ಕೆ ತಿರುಗಿಸಿದ್ದು, ಈ ವೇಳೆ ಅದು ನಿಯಂತ್ರಣ ತಪ್ಪಿ ಮತ್ತೊಂದು ಬದಿಗೆ ಚಲಿಸಿ ಪಲ್ಟಿಯಾಗಿದೆ.
ಟಿಟಿಯಲ್ಲಿದ್ದ ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದು, ಹೆದ್ದಾರಿ ದಾಟುತ್ತಿದ್ದ ಮಹಿಳೆಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಮಹಿಳೆಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಟಿಟಿ ವಾಹನ ಪಲ್ಟಿಯಾಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.