ಉಡುಪಿ, ಅ. 03 (DaijiworldNews/TA): ಉಚ್ಚಿಲ ದಸರಾಕ್ಕೆ ವೈಭವದ ತೆರೆಬಿದ್ದಿದೆ. ಮಹಾಲಕ್ಷ್ಮಿ ದೇಗುಲದಲ್ಲಿ ಆರಾಧಿಸಲ್ಪಟ್ಟ ನವದುರ್ಗೆಯರು ಮತ್ತು ಶಾರದ ಮಾತೆಯನ್ನು ವೈಭವದ ಮೆರವಣಿಗೆ ಮಾಡಿ ಸಮುದ್ರದಲ್ಲಿ ಜಲಸ್ತಂಭನ ಮಾಡಲಾಯಿತು. ಮೆರವಣಿಗೆ ನಂತರ ಕಾಪು ಕಡಲ ಕಿನಾರೆಯಲ್ಲಿ ಮೂರ್ತಿಗಳನ್ನಿಟ್ಟು ಗಂಗಾರತಿ ನಡೆಯಿತು.


ಕಾಶಿಯಿಂದ ಬಂದ ತಂಡ, ಶಂಖನಾದ, ದೂಪ ಸಹಿತ ದೀಪ ಮತ್ತು ಕರ್ಪೂರ ಆರತಿಯನ್ನು ಶಾಸ್ತ್ರೋಕ್ತವಾಗಿ ದೇವರಿಗೆ ಬೆಳಗಿದರು. ಸಮುದ್ರದಲ್ಲಿ ನಿಲ್ಲಿಸಿದ್ದ ಬೋಟುಗಳಲ್ಲೇ ಸಿಡಿಮದ್ದು ಪ್ರದರ್ಶನ ನಡೆಯಿತು. ಡ್ರೋನ್ ಮೂಲಕ ಪುಷ್ಪವೃಷ್ಟಿ ಮಾಡಿ ಮೂರ್ತಿಗಳನ್ನು ಜಲಸ್ತಂಭನ ಮಾಡಲಾಯ್ತು. ಜಿಲ್ಲಾಧಿಕಾರಿ ಸ್ವರೂಪ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ ಪಾಲ್ ಸುವರ್ಣ, ನಾಡೋಜ ಜಿ. ಶಂಕರ್ ಸೇರಿದಂತೆ ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.