ಬಂಟ್ವಾಳ, ಅ. 03 (DaijiworldNews/TA): ಏಷ್ಯನ್ ಡೆಫ್ ರಾಪಿಡ್ ಟೀಮ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ತಾಲೂಕಿನ ಕೆದಿಲ ಗ್ರಾಮದ ಕುದುಮಾನು ನಿವಾಸಿ ತಿಮ್ಮಪ್ಪ ಮೂಲ್ಯ ಮತ್ತು ಯಶೋಧಾ ದಂಪತಿಯ ಪುತ್ರಿ ಯಶಸ್ವಿ ಚಿನ್ನದ ಪದಕ ಗಳಿಸಿದ್ದಾರೆ.

ಏಷಿಯನ್ ಡೆಫ್ ಬ್ಲಿಟ್ಝ್ ಮತ್ತು ಕ್ಲಾಸಿಕಲ್ ಚೆಸ್ ನ ವೈಯಕ್ತಿಕ ಚಾಂಪಿಯನ್ ಶಿಪ್ ನಲ್ಲಿ ದ್ವಿತೀಯ ಸ್ಥಾನಗಳಿಸಿ ಎರಡು ಬೆಳ್ಳಿ ಪದಕಗಳನ್ನು ಅವರು ಗಳಿಸಿದ್ದಾರೆ. ಉಜ್ಬೆಕಿಸ್ತಾನ್ ಟಾಸ್ಕೆಂಟ್ ನಲ್ಲಿ ಸೆ.21ರಿಂದ 30ರವರೆಗೆ ಈ ಕೂಟ ನಡೆದಿತ್ತು.
ಯಶಸ್ವಿ ಅವರು ಹೈಸ್ಕೂಲ್ ನಲ್ಲಿದ್ದಾಗಲೇ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದು, ಬಿಎಸ್ ಸಿ ವ್ಯಾಸಂಗದ ಬಳಿಕ ಇದೀಗ ವಳಚ್ಚಿಲ್ ನ ಶ್ರೀನಿವಾಸ್ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ದ್ವಿತೀಯ ವರ್ಷದ ಎಂಸಿಎ ವ್ಯಾಸಂಗ ಮಾಡುತ್ತಿದ್ದಾರೆ.