ಸುಳ್ಯ, ಅ. 02 (DaijiworldNews/TA): ಬೈಕ್ ಅಡ್ಡ ಬಂದ ಪರಿಣಾಮ ಇಕೊ ನೇರವಾಗಿ ಸುಳ್ಯ ಅಂಬೆಟಡ್ಕದ ಟೈಲರ್ ಅಂಗಡಿಗೆ ನುಗ್ಗಿದೆ. ಕೆರ್ಪಳ ಹೇಮನಾಥ್ ಅವರು ಚಲಾಯಿಸುತ್ತಿದ್ದ ಕಾರು ಎನ್ನಲಾಗಿದ್ದು, ಗಾಡಿ ಬಂದ ರಭಸಕ್ಕೆ ಅಂಗಡಿ ಒಳಗಿನ ವಸ್ತುಗಳು, ಟೈಲರ್ ಮಿಷನ್, ವಸ್ತ್ರಗಳು ಸಂಪೂರ್ಣ ಹಾನಿಯಾಗಿದೆ.




ಮಧ್ಯಾಹ್ನದ ವೇಳೆ ಊಟದ ಸಮಯವಾದ ಕಾರಣ ಅಂಗಡಿಯ ಮಾಲಕಿ ಊಟಕ್ಕೆ ತೆರಳಿದ್ದು, ಸಿಬ್ಬಂದಿ ಅಂಗಡಿಯ ಹಿಂಭಾಗ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಸ್ಥಳದಲ್ಲಿ ಹೆಚ್ಚಿನ ಜನರು ಸೇರಿ ಕಾರನ್ನು ಹೊರ ತೆಗೆಯುವಲ್ಲಿ ಸಹಕರಿಸಿದರು.