ಉಡುಪಿ, ಅ. 01 (DaijiworldNews/AA): ದಸರಾ ರಜಾ ಇರುವ ಕಾರಣ ಉಚ್ಚಿಲ, ಉಡುಪಿ ಶ್ರೀ ಕೃಷ್ಣ ಮಠಕ್ಕೆ ಅನೇಕ ಕಡೆಗಳಿಂದ ಜನರು ಆಗಮಿಸುತ್ತಾರೆ. ಈ ಹಿನ್ನೆಲೆ ನಗರದ ಮಧ್ಯಭಾಗದಲ್ಲಿ, ಕೃಷ್ಣ ಮಠ ಸಂಪರ್ಕಿಸುವ ಕಲ್ಸಂಕ ಜಂಕ್ಷನ್ನಲ್ಲಿ ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಉಂಟಾಗಿ ಕೆಲ ಹೊತ್ತುಗಳ ಕಾಲ ಜನರು ಪರದಾಡುವ ಸ್ಥಿತಿ ಉಂಟಾಯಿತು.




ಉಚ್ಚಿಲ, ಉಡುಪಿಯಲ್ಲಿ ಕೂಡ ದಸರಾ ಹಬ್ಬ ಭರ್ಜರಿಯಾಗಿ ನಡೆಯುತ್ತದೆ. ಇಲ್ಲಿನ ದಸರಾವನ್ನು ನೋಡಲು ತುಂಬಾ ಜನರು ಆಗಮಿಸುತ್ತಾರೆ. ಈ ಹಿನ್ನಲೆ ಕಲ್ಸಂಕ ಜಂಕ್ಷನ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕೆಲ ಹೊತ್ತಗಳ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದನ್ನು ಗಮನಿಸಿದ ಯುವಕನೋರ್ವ ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸುವಲ್ಲಿ ಸಹಕರಿಸಿದರು. ಬಳಿಕ ಟ್ರಾಫಿಕ್ ಪೋಲಿಸರು ಸ್ಥಳಕ್ಕೆ ಆಗಮಿಸಿ ಎಂದಿನಂತೆ ಕಾರ್ಯ ಪ್ರವತ್ತರಾಗಿ ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.