ಕಡಬ, ಅ. 01 (DaijiworldNews/AA): ಕೆಎಸ್ಆರ್ಟಿಸಿ ಬಸ್ನಿಂದ ತನ್ನ ಸ್ಕೂಟರ್ ಮೇಲೆ ಕೆಸರು ರಾಚಿದ್ದಕ್ಕೆ ಸವಾರನೊಬ್ಬ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯ ನೆಟ್ಟಣ ಸೇತುವೆ ಸಮೀಪ ನಡೆದಿದೆ.

ಕೆಸರು ರಾಚಿದ ಕಾರಣ ಕೆರಳಿದ ಸವಾರ ಬಸ್ ಅನ್ನು ನಿಲ್ಲಿಸಿ, ಕಂಡಕ್ಟರ್ ಮತ್ತು ಚಾಲಕರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.
ಸಿಬ್ಬಂದಿ ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಆತ ಸುಮ್ಮನಾಗದೆ ವಾಗ್ವಾದ ಮುಂದುವರೆಸಿದ್ದಾನೆ.
ಕೊನೆಗೆ, ಬಸ್ ಸಿಬ್ಬಂದಿ ಸಮೀಪದ ತೋಡಿನಿಂದ ಬಕೆಟ್ನಲ್ಲಿ ನೀರು ತಂದು, ಸ್ಕೂಟರಿಗಾದ ಕೆಸರನ್ನು ತೊಳೆಯಲು ಸಹಾಯ ಮಾಡಿದ್ದಾರೆ. ಇದರಿಂದ ಸವಾರ ಶಾಂತನಾದನು ಎಂದು ತಿಳಿದುಬಂದಿದೆ.