ಮಂಗಳೂರು, ಅ.01 (DaijiworldNews/AK):ನಾಡಿನೆಲ್ಲೆಡೆ ಆಯುಧ ಪೂಜೆಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು. ವರ್ಷಂಪ್ರತಿಯಂತೆ ಈ ಬಾರಿ ಕೂಡ ಮಂಗಳೂರಿನ ದಾಯ್ಜಿವರ್ಲ್ಡ್ ಕಚೇರಿಯಲ್ಲಿ ಸಡಗರ ಸಂಭ್ರಮದಿಂದ ಆಯುಧಪೂಜೆಯನ್ನು ಆಚರಿಸಲಾಯಿತು.



ಈ ವೇಳೆ ದಾಯ್ಜಿವರ್ಲ್ಡ್ನ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ, ಕಾರ್ಯನಿರ್ವಾಹಕ ನಿರ್ದೇಶಕರಾದ ಮೆಲ್ವಿನ್ ರಾಡ್ರಿಗಸ್, ಅಲೆಕ್ಸಿಸ್ ಕ್ಯಾಸ್ಟಲಿನೋ ಸೇರಿದಂತೆ ಎಲ್ಲಾ ಆಡಳಿತ, ಸಿಬ್ಬಂದಿ ವರ್ಗ ಪೂಜಾ ವಿಧಿ ವಿಧಾನದಲ್ಲಿ ಪಾಲ್ಗೊಂಡರು.
ಸರ್ವ ಧರ್ಮ ಸಮನ್ವಯದ ಪ್ರತೀಕವಾಗಿ ಕಚೇರಿಯನ್ನು ವಿಶೇಷ ಅಲಂಕಾರದಿಂದ ಶೃಂಗಾರ ಮಾಡಲಾಯಿತು.