ಮಂಗಳೂರು, ಅ.01 (DaijiworldNews/TA): ಕೆ ಎಸ್ ಆರ್ ಟಿ ಸಿಯ ಮಂಗಳೂರು ವಿಭಾಗದ ವತಿಯಿಂದ ಸೆ. 22ರಂದು ಆರಂಭವಾಗಿರುವ ದಸರಾ ವಿಶೇಷ ಪ್ಯಾಕೇಜ್ ಪ್ರವಾಸಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಅ.2ರ ವರೆಗೆ ಕಾರ್ಯಾಚರಿಸಲು ಉದ್ದೇಶಿಸಿದ್ದ ಮಂಗಳೂರು - ಮಡಿಕೇರಿ, ಮಂಗಳೂರು - ಸಿಗಂದೂರು ಹಾಗೂ ಮಂಗಳೂರು -ಕೊಲ್ಲೂರು ಪ್ಯಾಕೇಜ್ ಪ್ರವಾಸವನ್ನು ಅ. 7ರ ವರೆಗೆ ವಿಸ್ತರಿಸಲಾಗಿದೆ. ಕೇವಲ 7 ದಿನದಲ್ಲಿ 2,928 ಮಂದಿ ಪ್ರವಾಸ ಮಾಡಿದ್ದು, ರಸ್ತೆ ಸಾರಿಗೆ ನಿಗಮಕ್ಕೆ 17 ಲಕ್ಷ ರೂ.ಆದಾಯ ಬಂದಿದೆ. ಕೆಎಸ್ಸಾರ್ಟಿಸಿ ದಸರಾ ದರ್ಶಿನಿಗೆ ಈ ಭಾರಿ ಭರ್ಜರಿ ಡಿಮ್ಯಾಂಡ್ ಬಂದಿದೆ ಎನ್ನಬಹುದು.