ಬಂಟ್ವಾಳ , ಸೆ. 30 (DaijiworldNews/AK): ಅನಾರೋಗ್ಯದ ಸಮಸ್ಯೆ ಹಾಗೂ ಮಗನ ಚಿಂತೆಯಿದ್ದ ಬಳಲುತ್ತಿದ್ದ ಮಹಿಳೆಯೋರ್ವರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆ ಪೋಲಿಸ್ ಠಾಣಾ ವ್ಯಾಪ್ತಿಯ ನೆಲ್ಲಿಗುಡ್ಡೆ ಎಂಬಲ್ಲಿ ನಡೆದಿದೆ.

ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಉಮಾವತಿ ( 68) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.15 ವರ್ಷಗಳ ಹಿಂದೆ ಉಮಾವತಿಯವರ ಮಗ ಮನೆ ಬಿಟ್ಟು ಹೋಗಿ ಕಾಣೆಯಾಗಿದ್ದಾರೆ. ಅದೇ ಚಿಂತೆಯಲ್ಲಿದ್ದವರಿಗೆ ಮಗನ ಚಿಂತೆಯಿಂದ ರಕ್ತದ ಒತ್ತಡ ಕಾಯಿಲೆಯಿಂದ ಬಳಲುತ್ತಿದ್ದರು.
ಹಾಗಾಗಿ ಮಾನಸಿಕವಾಗಿ ನೊಂದುಕೊಂಡು ಜೀವನದಲ್ಲಿ ಜುಗುಪ್ಪೆ ಹೊಂದಿದ್ದ ಇವರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.ಪುಂಜಾಲಕಟ್ಟೆ ಪೋಲಿಸ್ ಠಾಣೆಯಲ್ಲಿ ಮೃತರ ಕುಟುಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.