ಉಡುಪಿ, ಸೆ. 29 (DaijiworldNews/AK): ಬಸ್ ಮಾಲೀಕ ಸೈಫುದ್ದಿನ್ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿ ಆರು ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಎಂದು ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದರು.

ಮಹಮದ್ ಫೈಸಲ್ ಖಾನ್ (27), ಕುಂಜಿಬೆಟ್ಟು ನಿವಾಸಿ ಮೊಹಮ್ಮದ್ ಶರೀಫ್ (37) ಕಾಟಿಪಳ್ಳ ನಿವಾಸಿ ಅಬ್ದುಲ್ ಶುಕುರ್ (43) ಬಂಧಿತ ಆರೋಪಿಗಳು.
2020ರಲ್ಲಿ ಹಿರಿಯಡ್ಕ ಪೋಲಿಸ್ ಠಾಣೆಯಲ್ಲಿ ಮೊಹಮ್ಮದ್ ಶರೀಫ್ ವಿರುದ್ಧ ಮೊದಲು ಪ್ರಕರಣ ದಾಖಲಾಗಿದೆ. ಮಹಮದ್ ಫೈಸಲ್ ಖಾನ್ ಸೈಫ್ ಅವರ ಆಪ್ತನಾಗಿ ಕೆಲಸ ಮಾಡುತ್ತಿದ್ದವನು. ಸೈಫ್ ಅವರನ್ನು ಕೊಡವೂರಿನ ನಿವಾಸಕ್ಕೆ ಕರೆದುಕೊಂಡು ಬಂದು ರಾಡ್,ಮಚ್, ನಿಂದ ಮೂವರು ಹತ್ಯೆ ಮಾಡಿದ್ದಾರೆ. ಪ್ರಾಥಮಿಕ ಹಂತದಲ್ಲಿ ಹತ್ಯೆಗೆ ಕಾರಣ ತಿಳಿದು ಬಂದಿದೆ.
ತನಿಖೆಗೆ ಇನ್ನಷ್ಟು ದಿನಗಳು ಬೇಕಾಗಲಿದ್ದು, ಹಿಂದಿನಿಂದ ಯಾರಾದರು ಸಹಾಯ ಮಾಡಿದ್ದಾರಾ? ಎಂಬುದೆಲ್ಲಾ ತಿಳಿದುಕೊಳ್ಳಬೇಕಾಗುತ್ತದೆ. ಆರು ದಿನ ಪೋಲಿಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮತ್ತು ತನಿಖೆಯು ಮುಂದುವರಿದಿದೆ ಎಂದು ಹರಿರಾಮ್ ಶಂಕರ್ ಹೇಳಿದರು.