ಬಂಟ್ವಾಳ,ಸೆ. 19(DaijiworldNews/ AK): ಸಿನೆಮಾ ನಟಿ ರಾಧಿಕಾಕುಮಾರ ಸ್ವಾಮಿ ಅವರು ಬಿಸಿರೋಡಿನ ಆಡಳಿತ ಸೌಧದ ಕಚೇರಿಯ ಎರಡನೇ ಅಂತಸ್ತಿನಲ್ಲಿರುವ ಉಪನೋಂದಾವಣೆ ಕಚೇರಿಯಲ್ಲಿ ಶುಕ್ರವಾರ ಕಾಣಿಸಿಕೊಂಡಿದ್ದಾರೆ.

ತಾಯಿ ಜೊತೆ ಬಂದಿದ್ದ ಇವರಿಗೆ ನೊಂದಾವಣೆ ಕಚೇರಿಯಲ್ಲಿ ವಿಶೇಷ ಗೌರವ ನೀಡಿದ್ದು, ಕೇವಲ ಅರ್ಧ ತಾಸಿಗಿಂತಲೂ ಕಡಿಮೆ ಅವಧಿಯಲ್ಲಿ ತನ್ನ ಕೆಲಸ ಮುಗಿಸಿಕೊಂಡು ಮತ್ತೆ ವಾಪಸಾಗಿದ್ದಾರೆ.
ಆರಂಭದಲ್ಲಿ ರಾಧಿಕಾಕುಮಾರ ಸ್ವಾಮಿ ಅವರು ಜಮೀನು ಖರೀದಿಸಿ ಬಳಿಕ ನೊಂದಣಿಗಾಗಿ ಬಂದಿದ್ದಾರೆ ಎಂಬ ಮಾತುಗಳು ಹರಿದಾಡಿತ್ತು. ಸಾಮಾನ್ಯವಾಗಿ ನೊಂದಾವಣೆ ಕಚೇರಿಗೆ ಜಮೀನು ಖರೀದಿ ರಿಜಿಸ್ಟ್ರೇಷನ್ ಮಾಡಲು ಮಾತ್ರ ಬರುವುದು ಎಂಬ ತಪ್ಪು ಕಲ್ಪನೆ ಕೂಡ ಸಾರ್ವಜನಿಕರಲ್ಲಿರುವುರಿಂದ ಈ ಮಾತು ಹರಿದಾಡಿತ್ತು.
ಆದರೆ ರಾಧಿಕಾ ಅವರು ಈ ಹಿಂದೆ ಖರೀದಿ ಮಾಡಿರುವ ಜಮೀನಿನ ಮೇಲೆ ತೆಗೆದಿದ್ದ ಅಡಮಾನವನ್ನು (ಸಾಲ) ತೀರುವಳಿ ರಶೀದಿ ಮಾಡಲು ಬಂದಿದ್ದಾರೆ ಎಂದು ಉಪನೊಂದಾವಣೆ ಕಚೇರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ವೇಳೆ ಕಚೇರಿ ಸಿಬ್ಬಂದಿಗಳ ಸಹಿತ ಕಚೇರಿಗೆ ಬಂದಿದ್ದ ಸಾರ್ವಜನಿಕರು ರಾಧಿಕಾಕುಮಾರ ಸ್ವಾಮಿ ಅವರ ಜೊತೆ ಸೆಲ್ಫೀ ಫೊಟೋಗಳನ್ನು ಕ್ಲಿಕ್ಕಿಸಿ ಸಂಭ್ರಮಿಸಿದರು.