ಉಡುಪಿ,ಸೆ. 16 (DaijiworldNews/AK): ಉಡುಪಿಯಲ್ಲಿ ಅಷ್ಟಮಿ ಆಚರಣೆ ಸಂದರ್ಭದಲ್ಲಿ ಹುಲಿ ನೃತ್ಯ ಪ್ರದರ್ಶಿಸುತ್ತಿದ್ದ ಗುಂಡಿಬೈಲಿನ ಅಕ್ಷಯ್ ಶೇಟ್ ಅವರಿಗೆ ಹಾವು ಇರುವ ಬಗ್ಗೆ ತುರ್ತು ಕರೆ ಬಂದ ಹಿನ್ನಲೆ ಸ್ಥಳಕ್ಕೆ ತೆರಳಿ ಬೃಹತ್ ಹೆಬ್ಬಾವನ್ನು ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ.


ಅಕ್ಷಯ್ ಶೇಟ್ ಐಟಿ ವೃತ್ತಿಪರರಾಗಿದ್ದರೂ, ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸುವ ಮತ್ತು ಹಿಡಿಯುವುದರಲ್ಲಿ ಪರಿಣತಿ ಹೊಂದಿದ್ದಾರೆ. ಅವರು ತಮ್ಮ ಹುಲಿ ವೇಷಭೂಷಣವನ್ನು ಸಹ ತೆಗೆಯದೆ, ನೇರವಾಗಿ ಸ್ಥಳಕ್ಕೆ ಧಾವಿಸಿ, ಕೆಲವೇ ನಿಮಿಷಗಳಲ್ಲಿ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟರು.
ಜಾನಪದ ಕಲೆ, ವೃತ್ತಿಪರ ಜೀವನ ಮತ್ತು ಧೈರ್ಯಶಾಲಿ ರಕ್ಷಣಾ ಕಾರ್ಯವನ್ನು ಸಮತೋಲನಗೊಳಿಸುವ ಅವರ ವಿಶಿಷ್ಟ ಕಾರ್ಯವು ಸ್ಥಳೀಯ ಸಮುದಾಯದಿಂದ ಪ್ರಶಂಸೆಗಳಿಸಿದೆ.