ಉಡುಪಿ, ಸೆ. 15 (DaijiworldNews/AK): ವೃಂದಾ ವನಸ್ಥರಾಗಿರುವ ಶಿರೂರು ಮಠದ ಶ್ರೀ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಸ್ಮರಣಾರ್ಥ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಆಚರಣೆಯ ಪ್ರಯುಕ್ತ ಭಕ್ತಾದಿಗಳಿಗೆ ಹತ್ತು ಸಾವಿರ ಚಕ್ಕುಲಿಗಳನ್ನು ಉಡುಪಿ ಜಿಲ್ಲಾ ನಾಗರೀಕ ಸಮಿತಿ ನಗರದ ಸ್ವದೇಶ್ ಹೋಟೆಲ್ ಎದುರಿನಲ್ಲಿ ವಿತರಿಸಿದರು .



ಕಾರ್ಯಕ್ರಮದಲ್ಲಿ ಡಿ ವೈ ಎಸ್ ಪಿ ಪ್ರಭು ಡಿ ಟಿ, ಬಡುಗುಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ, ವಿಕಾಸ್ ಶೆಟ್ಟಿ, ನಾಗಭೂಷಣ್ ಶೇಟ್ ಒಳಕಾಡು, ಸಮಾಜ ಸೇವಕರಾದ ಬಾಸ್ಕರ್ ಶೇರಿಗಾರ್, ನಿತ್ಯಾನಂದ ಒಳಕಾಡು, ಶಂಕರ್ ಶೆಟ್ಟಿ ಚಿತ್ಪಾಡಿ, ಉದ್ಯಮಿ ಎಂ ಶ್ರೀನಾಗೇಶ್ ಹೆಗ್ಡೆ, ವಾಸು ಪ್ರಿಂಟರ್ಸ ವಾಸುದೇವ್ ಚಿಟ್ಪಾಡಿ, ನಾಗರೀಕ ಸಮಿತಿಯ ಪದಾಧಿಕಾರಿಗಳು. ತೈಲ ಖಾದ್ಯತಜ್ಞ ಶಂಕರ್ ನಾಯ್ಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜನೆಯ ನೇತೃತ್ವವಹಿಸಿದ್ದ ನಾಗರೀಕ ಸಮಿತಿಯ ನಿತ್ಯಾನಂದ ಒಳಕಾಡುವರು ಕಳೆದ ಆರು ವರ್ಷಗಳಿಂದ ಜನ್ಮಾಷ್ಟಮಿಗೆ ವಿಶೇಷ ಮೆರಗು ನೀಡುತ್ತಿದ್ದ ಶಿರೂರು ಶ್ರೀಪಾದರ ನೆನಪಿಗಾಗಿ ದಾನಿಗಳ ಸಹಕಾರ ಪಡೆದು ಚಕ್ಕುಲಿ ವಿತರಿಸಿಕೊಂಡು ಬಂದಿದ್ದಾರೆ.