ಸುಳ್ಯ, ಸೆ. 15 (DaijiworldNews/AA): ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಅಲ್ಯೂಮೀನಿಯಂ ಗಳೆ ವಿದ್ಯುತ್ ಲೈನಿಗೆ ತಗುಲಿ ಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ಬೆಳ್ಳಾರೆ ಬಳಿಯ ಅಯ್ಯನಕಟ್ಟೆಯಿಂದ ಸಂಭವಿಸಿದೆ.

ಮೃತರಾದ ವ್ಯಕ್ತಿ ತಂಬಿನಮಕ್ಕಿಯ ರಾಮ ಎಂದು ಗುರುತಿಸಲಾಗಿದೆ.. ಅಯ್ಯನಕಟ್ಟೆಯ ಗೋಕುಲಂ ಎದುರುಗಡೆ ಇರುವ ಸಿದ್ದಿಕ್ ಎಂಬರಿಗೆ ಸೇರಿದ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.