ಬಂಟ್ವಾಳ, ಸೆ. 12 (DaijiworldNews/TA): ಅಕ್ರಮವಾಗಿ ನಡೆಯುತ್ತಿದ ಕೋಳಿ ಅಂಕ ಹಾಗೂ ಜೂಜಾಟದ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿದ ಘಟನೆ ಇತ್ತೀಚೆಗೆ ಬಂಟ್ವಾಳ ತಾಲೂಕಿನ ಕೊಡಂಬೆಟ್ಟು ಗ್ರಾಮದ ತಿಮ್ಮೊಟ್ಟು ಎಂಬಲ್ಲಿ ಸಂಭವಿಸಿದ್ದು, ಜೂಜಾಟ ನಿರತರನ್ನು ಹಾಗೂ ಜೂಜಾಟಕ್ಕೆ ಬಳಸಿದ ಕೋಳಿ ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಪುಂಜಾಲಕಟ್ಟೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ತಿಮ್ಮೊಟ್ಟು ಎಂಬಲ್ಲಿಯ ಸರಕಾರಿ ಸ್ಥಳಕ್ಕೆ ಹೋದಾಗ ಅಪಾದಿತರಾದ ಜಗದೀಶ್ ಶೆಟ್ಟಿ, ನವೀನ, ಪ್ರದೀಪ್, ಕೇಶವ ತಿಮ್ಮೊಟ್ಟು, ಅಜಿತ್ ಇರ್ವತ್ತೂರು ಮತ್ತು ಇತರರು ಸಂಘಟಿತರಾಗಿ ಸೇರಿಕೊಂಡು ಹಣವಾಗಿ ಪಣವಾಗಿಟ್ಟು ಕೊಂಡು ಅಕ್ರಮವಾಗಿ ಕೋಳಿಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಜೂಜಾಟವಾಡುತ್ತಿದ್ದರು ಎನ್ನಲಾಗಿದೆ.
ಈ ವಿಚಾರ ತಿಳಿದು ಪೊಲೀಸರು ದಾಳಿ ನಡೆಸಿ ಅಪಾದಿತರನ್ನು ಮತ್ತು ಅಪಾದಿತರು ಕೋಳಿ ಅಂಕಕ್ಕೆ ಉಪಯೋಗಿಸಿದ ಒಂದು ಹುಂಜ ಕೋಳಿ ಹಾಗೂ ಜೂಜಾಟಕ್ಕೆ ಉಪಯೋಗಿಸಿದ 9430 ರೂ. ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.