ಉಡುಪಿ, ಸೆ. 11 (DaijiworldNews/TA): ಕಿನ್ನಿಮೂಲ್ಕಿಯಲ್ಲಿ ಗಾಂಜಾ ಸಾಗಾಟ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಎಸ್ಪಿ ಹರಿರಾಂ ಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಕರಾವಳಿ ಪ್ರದೇಶಗಳಿಗೆ ಸರಬರಾಜು ಮಾಡುವ ಉದ್ದೇಶದಿಂದ 65 ಕೆ.ಜಿ ಗಾಂಜಾವನ್ನು ತರಲಾಗಿತ್ತು. ಗಾಂಜಾವನ್ನು ಆಂಧ್ರಪ್ರದೇಶ-ಒರಿಸ್ಸಾ ಗಡಿ ಪ್ರದೇಶದಿಂದ ಪೂರೈಕೆ ಮಾಡಲಾಗಿತ್ತು ಎಂಬ ಮಾಹಿತಿ ಇದೆ. ಪ್ರಕರಣದಲ್ಲಿ ಇತರೆ ಹಲವರು ಭಾಗಿಯಾಗಿದ್ದು, ಶೀಘ್ರದಲ್ಲೇ ಬಂಧನ ಕಾರ್ಯ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.