ಮಂಗಳೂರು, ಸೆ. 11 (DaijiworldNews/TA): ಹಲವು ಕಡೆಗಳಲ್ಲಿ ರಸ್ತೆ ದುರವಸ್ಥೆಯಿಂದ ಜನತೆ ದಿನನಿತ್ಯ ಎಂಬಂತೆ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಈ ನಡುವೆ ನಗರದ ಮಿಲಾಗ್ರಿಸ್ ಕಾಲೇಜಿನ ಗೇಟಿನ ಮುಂಭಾಗದಲ್ಲಿ ರಸ್ತೆತ ಮೇಲ್ಭಾಗದ ಕಾಂಕ್ರಿಟ್ ಭಾಗ ತೆರೆದುಕೊಂಡು ಎರಡು ತಿಂಗಳು ಕಳೆದರೂ ಇನ್ನೂ ಪರಿಹಾರ ಕಲ್ಪಿಸಲಾಗಿಲ್ಲ.

ಒಂದು ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಓಡಾಡುವ ಈ ಜಾಗದಲ್ಲಿ ಸೂಕ್ತ ರೀತಿಯಲ್ಲಿ ದುರಸ್ತಿಗೊಳಿಸದೇ ಬಿಟ್ಟಿದ್ದು, ಸಂಭಾವ್ಯ ಅಪಾಯಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಜಿಲ್ಲಾ ಆಸ್ಪತ್ರೆ ವೆನ್ಲಾಕಿನ ಮುಂಭಾಗದಲ್ಲಿ ಸಾವಿರಾರು ಮಂದಿ ಸಾರ್ವಜನಿಕರು ದಿನನಿತ್ಯ ಓಡಾಡುವ ಈ ಜಾಗದಲ್ಲಿ ಅಪಾಯಕಾರಿ ವ್ಯವಸ್ಥೆಯನ್ನು ಸರಿಪಡಿಸದೆ ಸಂಬಂಧಪಟ್ಟ ಅಧಿಕಾರಿಗಳು ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಇನ್ನು ಜೋರಾಗಿ ಮಳೆ ಬರುವ ಸಮಯದಲ್ಲಿ ಗುಂಡಿಬಿದ್ದ ಚರಂಡಿ ಕಾಣದೆ ವಿದ್ಯಾರ್ಥಿಗಳು ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ. ಈ ಬಗ್ಗೆ ಹಿಂದೆಯೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ. ನ್ನಾದರೂ ಪಾಲಿಕೆ ಅಥವಾ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕಿದೆ.