ಮೂಡುಬಿದಿರೆ, ಸೆ. 11 (DaijiworldNews/AK): ಕಲ್ಲಮುಂಡ್ಕೂರಿನಲ್ಲಿ ಆಗಸ್ಟ್ 19 ರಂದು ಕದ್ದ ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡು ಅವುಗಳ ಮಾಲೀಕರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
https://daijiworld.ap-south-1.linodeobjects.com/Linode/images3/ctletheft_110925_1.jpg>
ಆಗಸ್ಟ್ 19 ರ ರಾತ್ರಿ ಕಲ್ಲಮುಂಡ್ಕೂರಿನ ಬಲರಾಮ್ ಎಂಬುವವರಿಗೆ ಸೇರಿದ ಎರಡು ಜಾನುವಾರುಗಳನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದರು.
ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೃತ್ತ ನಿರೀಕ್ಷಕ ಸಂದೇಶ್ ಪಿಜಿ ತನಿಖೆ ಕೈಗೆತ್ತಿಕೊಂಡಿದ್ದರು, ಕದ್ದ ದನಗಳು ಅಡ್ಡೂರಿನಲ್ಲಿವೆ ಎಂಬ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಅವುಗಳನ್ನು ಪರಿಶೀಲಿಸಿದಾಗ ಅವು ಕದ್ದ ಜಾನುವಾರುಗಳು ಎಂದು ದೃಢಪಟ್ಟಿತು. ದನ ಕಳ್ಳರು ಅವುಗಳನ್ನು ಅಡ್ಡೂರಿನಲ್ಲಿರುವ ವ್ಯಾಪಾರಿಗೆ ಮಾರಾಟ ಮಾಡಿರುವುದು ಕಂಡುಬಂದಿದೆ.