ಬಂಟ್ವಾಳ, ಸೆ. 09 (DaijiworldNews/TA): ಕಲಾಕ್ಷೇತ್ರದ ಮೂಲಕ ಬದುಕು ನಡೆಸುವ ಕರಾವಳಿಯ ಕಲಾವಿದರಿಗೆ ಬದುಕು ಕೊಡಿ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಅಶೋಕ್ ಶೆಟ್ಟಿ ಸರಪಾಡಿ ಅವರು ಭಿನ್ನವಿಸಿಕೊಂಡಿದ್ದಾರೆ.

ಗಂಡು ಕಲೆ ಯಕ್ಷಗಾನ ಪ್ರಸ್ತುತ ದೇಶ ಮಾತ್ರವಲ್ಲ ಅಂತಾರಾಷ್ಟ್ರೀಯ ವ್ಯಾಪ್ತಿಯಲ್ಲಿ ಅವರಿಸಿದೆ. ಅಂತಹ ಯಕ್ಷಗಾನ ಪ್ರದರ್ಶನಕ್ಕೆ ಸಮಯ ನಿರ್ಬಂಧಿಸುವ ಮೂಲಕ ಬ್ರಹ್ಮಾಸ್ತ್ರ ಪ್ರಯೋಗಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ. ಭೌಗೋಳಿಕವಾಗಿ ಕರಾವಳಿ ಭಾಗ ವಿಭಿನ್ನವಾಗಿ ಕಾಣಿಸಿಕೊಂಡಿರುವುದು ಕಲೆಯ ಆರಾಧನೆಯ ಕಾರಣಕ್ಕಾಗಿ, ಅದರಲ್ಲೂ ದ.ಕ. ಜಿಲ್ಲೆ ನೆರೆಯ ಕಾಸರಗೋಡು ಉತ್ತರ ಭಾಗದ ಗುಡುಕಲೆ ಯಕ್ಷಗಾನ ಎಂದು ಹೇಳಿಕೊಳ್ಳಲು ಹೆಮ್ಮೆ ಯಾಗುತ್ತಿದೆ ಆದರೆ ದುರ್ದೈವವಶಾತ್ ಈ ಕಲೆಯನ್ನು ನೋಡಿ ಆಕರ್ಷಿತರಾಗಿ ನನ್ನಂತ ಸಾವಿರಾರು ಮಂದಿ ಯಕ್ಷಗಾನ ಕಲಾ ಕ್ಷೇತ್ರವನ್ನು ಆಯ್ಕೆ ಮಾಡಿ ಇದೀಗ ಆತಂತ್ರರಾಗಿ ಜೀವನವೇ ಮುಗಿದು ಹೋದದಂತಾಗಿದೆ ಎಂದು ತಿಳಿಸಿದ್ದಾರೆ.
ಸೂರ್ಯಾಸ್ಥದಿಂದ ಸೂರ್ಯೋದಯದವರೆಗೆ ಪ್ರದರ್ಶಿಸಲ್ಪಡುತ್ತಿದ್ದ ಯಕ್ಷಗಾನ ಪ್ರದರ್ಶನಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ರಾತ್ರಿ 10 ಗಂಟೆಯಿಂದ ಧ್ವನಿವರ್ಧಕ ಬಳಕೆ ಮಾಡಲಾರದೆಂದು ಸಮಯ ನಿರ್ಬಂಧ ಮಾಡುವ ಮೂಲಕ ಬ್ರಹ್ಮಾಸ್ತ್ರ ಪ್ರಯೋಗ ಮಾಡಿರುವುದು ಯಕ್ಷ ಕಲಾವಿದರು ಮಾತ್ರವಲ್ಲ ಇದಕ್ಕೆ ಇಡೀ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬದುಕಲು ಬೇರೆ ದಾರಿಯಿಲ್ಲ ಎಂಬ ಬೇಸರದ ಮಾತನ್ನು ಸಹ ಹೊರಹಾಕಿದ್ಡಾರೆ.