ಬಂಟ್ವಾಳ, ಸೆ. 09 (DaijiworldNews/TA): ತಾಲೂಕಿನ ನೂತನ ತಹಶಿಲ್ದಾರ್ ಆಗಿ ಮಂಜುನಾಥ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಬಂಟ್ವಾಳ ತಹಶಿಲ್ದಾರ್ ಆಗಿದ್ದ ಅರ್ಚನಾ ಭಟ್ ಅವರು ವರ್ಗಾವಣೆಗೊಂಡ ಬಳಿಕ ತೆರವಾದ ಬಂಟ್ವಾಳ ತಹಶಿಲ್ದಾರ್ ಹುದ್ದೆಗೆ ಕನಕಪುರ ತಾಲೂಕಿನಲ್ಲಿ ತಹಶಿಲ್ದಾರ್ ಅಗಿ ಕರ್ತವ್ಯದಲ್ಲಿದ್ದ ಮಂಜುನಾಥ್ ಅವರನ್ನು ಬಂಟ್ವಾಳಕ್ಕೆ ವರ್ಗಾವಣೆಗೊಳಿಸಿ ಸರಕಾರ ಅದೇಶ ಹೊರಡಿಸಿತ್ತು. ತಿಂಗಳ ಬಳಿಕ ಅಧಿಕೃತವಾಗಿ ಅವರು ಚಾರ್ಜ್ ತೆಗೆದುಕೊಂಡಿದ್ದಾರೆ.