ಮಂಗಳೂರು, ಸೆ. 08 (DaijiworldNews/AK):ಆಟೋದಲ್ಲಿ ಬೆಲೆಬಾಳುವ ವಸ್ತುಗಳು ಮತ್ತು ಪ್ರಮುಖ ದಾಖಲೆಗಳನ್ನು ಹೊಂದಿದ್ದ ತನ್ನ ಬ್ಯಾಗ್ ಅನ್ನು ಮರೆತಿದ್ದ ಪ್ರಯಾಣಿಕ ಮರಳಿ ಪಡೆಯುವಲ್ಲಿ ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.

ಬಳಿಕ ಪ್ರಯಾಣಿಕ ಬ್ಯಾಗ್ ಮರಳಿ ಪಡೆಯುವಲ್ಲಿ ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಯನ್ನು ಶ್ಲಾಘಿಸಿದ್ದಾನೆ.
ಅರ್ಫತ್ ಮೊಹಿದ್ದೀನ್ ಖಾಜಿ ಎಂದು ಗುರುತಿಸಲಾದ ಪ್ರಯಾಣಿಕ ವಿಮಾನ ನಿಲ್ದಾಣಕ್ಕೆ ಬಂದ ನಂತರ ತನ್ನ ಬ್ಯಾಗ್ ಅಲ್ಲಿಯೇ ಬಿಟ್ಟು ಹೋಗಿರುವುದು ಅರಿವಾಗಿದೆ. ಪ್ರಯಾಣಿಕ ತಕ್ಷಣ ಸಿಐಎಸ್ಎಫ್ನಿಂದ ಸಹಾಯ ಕೋರಿದ್ದಾನೆ. ಮತ್ತು ಆಟೋರಿಕ್ಷಾವನ್ನು ಪತ್ತೆಹಚ್ಚಲು ಮಂಗಳೂರು ನಗರ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಲಾಯತು. .
ಪೊಲೀಸರ ಸಹಾಯದಿಂದ, ಆಟೋರಿಕ್ಷಾ ಪತ್ತೆಯಾಗಿದ್ದು, ಚಾಲಕ ಎಲ್ಲಾ ಬೆಲೆಬಾಳುವ ವಸ್ತುಗಳು ಮತ್ತು ದಾಖಲೆ ಇರುವ ಬ್ಯಾಗ್ನ್ನು ಹಿಂತಿರುಗಿಸಿದ್ದಾನೆ. ಈ ಸಂದರ್ಭದಲ್ಲಿ ಪ್ರಾಮಾಣಿಕತೆಗಾಗಿ ಸಿಐಎಸ್ಎಫ್ ಮತ್ತು ಮಂಗಳೂರು ನಗರ ಪೊಲೀಸರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.