ಕಾಸರಗೋಡು , ಸೆ. 08 (DaijiworldNews/AK): ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಯುವ ಇಂಜಿನೀಯರ್ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಇರಿಯಣ್ಣಿ ಮಂಜಕಲ್ ಎಂಬಲ್ಲಿ ನಡೆದಿದೆ.

ಬೇತೂರುಪಾರ ವಟ್ಟಂತಟ್ಟ್ ನ ಎಂ .ಜಿತೇಶ್ (22) ಮೃತಪಟ್ಟವರು. ಕಾನತ್ತೂರು ಕಡೆಯಿಂದ ಇರಿಯಣ್ಣಿ ಕಡೆಗೆ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಸ್ಸು ತಂಗುದಾಣದ ಕಂಬಕ್ಕೆ ಬಡಿದು ಮಗುಚಿ ಈ ದುರ್ಘಟನೆ ನಡೆದಿದೆ.
ಜಿತೇಶ್ ಬೆಂಗಳೂರಿನ ಏರೋನಾಟಿಕ್ ಇಂಜಿನೀಯರ್ ಆಗಿದ್ದರು. ಓಣಂ ಹಿನ್ನೆಲೆ ಯಲ್ಲಿ ಊರಿಗೆ ಬಂದಿದ್ದರು. ಅದೂರು ಠಾಣಾ ಪೊಲೀಸರು ಮಹಜರು ನಡೆಸಿದರು. ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು