ಮಂಗಳೂರು, ಸೆ. 08 (DaijiworldNews/AK): ಆನ್ಲೈನ್ ಮೂಲಕ ಹೂಡಿಕೆ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ 1,14,50000 ರೂ. ವಂಚನೆ ಮಾಡಿರುವ ಬಗ್ಗೆ ಸೈಬರ್ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://daijiworld.ap-south-1.linodeobjects.com/Linode/images3/fraud_08092025_1.jpg
ದೂರುದಾರ ವ್ಯಕ್ತಿ ತನ್ನ ಉಳಿತಾಯದ ಹಣವನ್ನು ಬ್ಯಾಂಕ್ ಖಾತೆಯಲ್ಲಿರಿಸಿದ್ದರು. ಜು, 17 ರಂದು ಅವರನ್ನು ಅಪರಿಚಿತನೊಬ್ಬ ಸ್ಟಾಕ್ ಎಕ್ಸ್ಚೇಂಜ್ ವಾಟ್ಸ್ಟ್ಯಾಪ್ ಗ್ರೂಪ್ಗೆ ಸೇರಿಸಿದ್ದನು. ಗ್ರೂಪ್ ಅಡ್ಮಿನ್ ವಿರೇಂದರ್ಸಿಂಗ್ ಎಂಬಾತ ಸಂದೇಶ ಕಳುಹಿಸಿ ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸುವ ಅಮಿಷ ತೋರಿಸಿದನು.
ಅದರಂತೆ ಆ.11 ರಂದು ಅಪರಿಚಿತ ಮಹಿಳೆ ಕ್ರಿಸ್ಟಿನ್ ಎಂಬವಳನ್ನು ವಾಟ್ಸ್ಅಪ್ ಮೂಲಕ ಸಂಪರ್ಕಿಸಿ ಮಾರುಕಟ್ಟೆ ಬಗ್ಗೆ ವಿಚಾರಿಸಿದ್ದರು, ಬಳಿಕ ಆ 13 ರಿಂದ ಸೆ.2 ರವರೆಗೆ ಹಂತ ಹಂತವಾಗಿ ಆರ್ಟಿಜಿಎಸ್, ನೆಫ್ಟ್ ಮೂಲಕ 1, 14, 50,00 ರೂಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದರು. ಬಳಿಕ ಶೇ.೨೦ ರಷ್ಟು ಹೆಚ್ಚಿನ ತೆರಿಗೆ ಪಾವತಿಸುವಂತೆ ಹಾಗೂ ಹೂಡಿಕೆ ಮಾಡದಿದ್ದರೆ ಹಣ ಹಿಂಪಡೆಯಲು ಅಗುವುದಿಲ್ಲ ಎಂದು ತಿಳಿದ್ದರು.
23.96 ಲಕ್ಷ ರೂ ವಂಚನೆ
ಟ್ರೇಡಿಂಗ್ ಜಾಹೀರಾತು ನೋಡಿ ಹಣ ಹೂಡಿಕೆ ಮಾಡಲು ಹೋಗಿ 23.96 ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಮಂಗಳೂರು ಗ್ರಾಮಾಂತರ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ದುಬೈಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿ ಮನೆಯಲ್ಲಿದ್ದರು. 2024ರ ಫೆ.27 ರಂದು ಟ್ರೇಡಿಂಗ್ ಜಾಹೀರಾತು ನೋಡಿ ನೋಂದಣಿ ಮಾಡಿ ಮೊದಲಿಗೆ 82,862 ರೂ. ಪಾವತಿಯನ್ನು ಮಾಡಿದರು. ನಂತರ ಹಂತ ಹಂತವಾಗಿ ಒಟ್ಟು 23,96,980 ರೂ. ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದರು