ಮಂಗಳೂರು : ಕುಲಶೇಖರ ಕೋರ್ಡೆಲ್ ಚರ್ಚ್ನಲ್ಲಿ ಮೊಂತಿ ಫೆಸ್ತ್ ಸಂಭ್ರಮಾಚರಣೆ
Mon, Sep 08 2025 02:34:07 PM
ಮಂಗಳೂರು, ಸೆ. 08(DaijiworldNews/TA): ಕುಲಶೇಖರದ ಕೋರ್ಡೆಲ್ ಹೋಲಿ ಕ್ರಾಸ್ ಚರ್ಚ್ ನಲ್ಲಿ ಸಂಭ್ರಮದ ಮೋಂತಿ ಹಬ್ಬವನ್ನು ಆಚರಿಸಲಾಯಿತು. ಬಲಿಪೂಜೆಯಲ್ಲಿ ಫಾ ಕ್ಲಿಪರ್ಡ್ ಫೆರ್ನಾಂಡಿಸ್, ಫಾದರ್ ವಿಜಯ್ ಮೊಂತೆರೋ, ಫಾದರ್ ಡೆಂಜಿಲ್ ಲೋಬೊ, ಫಾದರ್ ರೋನ್ಸನ್ ಪಿಂಟೋ, ಅಜ್ಮಿರ್ ಡಯಸಿಸ್ ನ ಫಾದರ್ ಹೆನ್ರಿ ಮೋರಸ್, ಪಾಲಾನಾ ಸಮಿತಿಯ ಉಪಾಧ್ಯಕ್ಷ ರೂತ್ ಕಾಸ್ತೇಲಿನೋ ಮತ್ತು ಕಾರ್ಯದರ್ಶಿ ಆನಿಲ್ ಡೇಸಾ ಮತ್ತು ಭಕ್ತಾದಿ ಗಳು ಮಾತೆ ಮಾರಿಯಮ್ಮನಿಗೆ ಹೂ ಗಳನ್ನು ಅರ್ಪಿ ಸಿ ಹೊಸ ತೆನೆ ಯನ್ನು ಆಶೀರ್ವದಿಸಿ ಸ್ವೀಕರಿಸಿದರು.
ಇನ್ನು 1763ರಲ್ಲಿ ಮಂಗಳೂರಿನ ಫರಂಗಿಪೇಟೆಯ ಮೋಂತೆ ಮರಿಯಾನೊ ಮಠದಲ್ಲಿ ಗೋವಾದ ಧರ್ಮಗುರು ಫಾದರ್ ಜೋಕಿಂ ಮಿರಾಂದಾ ಅವರು ಮೊದಲ ಬಾರಿಗೆ ಮೋಂತಿ ಹಬ್ಬವನ್ನು ಆಚರಿಸಿದರು. ಇದೊಂದು ಹೊಸ ತೆನೆಯ ಹಾಗೂ ಪ್ರಕೃತಿಯ ಹಬ್ಬವಾಗಿದ್ದು, ಜೊತೆಗೆ ಮರಿಯಮ್ಮ ಅವರ ಹುಟ್ಟಿದ ದಿನವೂ ಆಗಿದೆ.
ಪ್ರಕೃತಿಯ ಮೊದಲ ಫಸಲನ್ನು ದೇವರಿಗೆ ಅರ್ಪಿಸಲಾಗುತ್ತದೆ. ಇದನ್ನು ಹೆಣ್ಮಕ್ಕಳ ದಿನವೆಂದು ಕೂಡ ಆಚರಿಸಲಾಗುತ್ತದೆ. 9 ದಿವಸಗಳ ಕಾಲ ಮಾತೆ ಮರಿಯಮ್ಮ ಅವರ ಮೂರ್ತಿಗೆ ಹೂಗಳನ್ನು ಅರ್ಪಿಸಲಾಗುತ್ತದೆ. ಕೊನೆಗೆ ಸೆಪ್ಟೆಂಬರ್ 8ರಂದು ಹಬ್ಬ ಮೋಂತಿ ಹಬ್ಬ ಆಚರಿಸಲಾಗುತ್ತದೆ. ವಿಶ್ವಾದ್ಯಂತ ನೆಲೆಸಿರುವ ಮಂಗಳೂರಿಗರು ಈ ಹಬ್ಬವನ್ನು ಆಚರಿಸುತ್ತಾರೆ.