ಕಾಸರಗೋಡು, ಸೆ. 08(DaijiworldNews/TA): ನಗರದಲ್ಲಿ ಮೊಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸೋಮವಾರ ಬೆಳಿಗ್ಗೆ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಬಲಿ ಪೂಜೆ ನೆರವೇರಿತು.


ಕಯ್ಯಾರ್ ಕ್ರಿಸ್ತರಾಜ ಇಗರ್ಜಿಯಲ್ಲಿ ನಡೆದ ಬಲಿಪೂಜೆ ಯನ್ನು ಬೆಳ್ಳೂರು ಸಂತ ಡೊಮಿನಿಕ್ ಶಾಲೆಯ ಪ್ರಾಂಶುಪಾಲ ವಂದನೀಯ ಫಾದರ್ ಅರುಣ್ ಫ್ರಾನ್ಸಿಸ್ ಡಿ’ಸೋಜ ನೆರವೇರಿಸಿದರು. ಕಯ್ಯಾರು ಕ್ರಿಸ್ತ ರಾಜ ದೇವಾಲಯದ ಧರ್ಮಗುರು ವಂ. ಫಾ. ವಿಶಾಲ್ ಮೋನಿಸ್ ಪ್ರಾರ್ಥನೆಯ ವಿಧಿ ವಿಧಾನಕ್ಕೆ ನೇತೃತ್ವ ನೀಡಿದರು.
ಮೊಂತಿ ಹಬ್ಬದ ಸಲುವಾಗಿ ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆಗಳು ಜರಗಿದವು. ಹೊಸ ತೆನೆ ಯನಮಿಶ್ರ ಮಾಡಿದ ಪಾಯಸವನ್ಬು ಕೂಡಾ ಜನರಿಗೆ ಚರ್ಚ್ ವತಿಯಿಂದ ಇದೇ ಸಂಧರ್ಭದಲ್ಲಿ ನೀಡಲಾಯಿತು. ಸಾವಿರಾರು ಮಂದಿ ಭಕ್ತಾಧಿಗಳು ಈ ಸಂಧರ್ಭದಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿದರು.