ಉಡುಪಿ, ಸೆ. 08(DaijiworldNews/TA): ಮಾತೆ ಮರಿಯಮ್ಮನವರ ಜನ್ಮದಿನದವಾದ ಮೊಂತಿ ಫೆಸ್ತ್ ಅನ್ನು ಉಡುಪಿ ಧರ್ಮಪ್ರಾಂತ್ಯದ ವಿವಿಧ ಚರ್ಚ್ ಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ಉಡುಪಿ ಶೋಕ ಮಾತ ಇಗರ್ಜಿಯಲ್ಲಿ ಪವಿತ್ರ ಬಲಿಪೂಜೆ ಸರ್ಮಪಿಸಿದರು.


ಕರಾವಳಿ ಕ್ರೈಸ್ತರು ಮಾತೆ ಮರಿಯಮ್ಮನವರ ಜನ್ಮ ದಿನವನ್ನು ಮೊಂತಿ ಹಬ್ಬವಾಗಿ, ಹೊಸ ತೆನೆಯ ಹಬ್ಬವನ್ನಾಗಿ ಆಚರಿಸುತ್ತಾರೆ. ಚರ್ಚ್ ಗಳಲ್ಲಿ ಪುಟ್ಟ ಮಕ್ಕಳು ಮಾತೆ ಮರಿಯಮ್ಮನವರಿಗೆ ಹೂ ಗಳನ್ನು ಸರ್ಮಪಿಸಿದರು. ಇದೇ ಸಂಧರ್ಭದಲ್ಲಿ ಹೊಸ ತೆನೆಯನ್ನು ಆಶೀರ್ವದಿಸಿ ಭಕ್ತರಿಗೆ ಹಂಚಲಾಯಿತು.