ಮಂಜೇಶ್ವರ, ಸೆ. 08(DaijiworldNews/TA): ಮಂಜೇಶ್ವರದ ವರ್ಕಾಡಿ ಕೊಡ್ಲಮೊಗರಿನ ಪಲ್ಲೆದಡ್ಪುವಿನಲ್ಲಿ ಕೊಡ್ಲಮೊಗರು ಗ್ರಾಮ ಕ್ಷೇತ್ರದಲ್ಲಿ ಶ್ರೀ ಗೋಪಾಲಕೃಷ್ಣದೇವರ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮ ಅನೇಕ ಭಕ್ತರ ಸಮ್ಮುಖದಲ್ಲಿ ಜರುಗಿತು.


ಈ ವೇಳೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಪ್ರಕೃತಿಯ ಮಡಿಲಿನ ಅತೀ ಕಿರಿದಾದ ಜಾಗದಲ್ಲಿ ಸುಂದರವಾದ ಗೋಪಾಲಕೃಷ್ಣ ಬಾಲಾಲಯ ಪ್ರತಿಷ್ಠೆಗೊಂಡಿದ್ದು, ಕೃಷ್ಣ ಎಲ್ಲದಕ್ಕೂ ಅವನದ್ದೇ ರೀತಿಯಲ್ಲಿ ಉತ್ತರ ಕೊಡುವ ಸಾಮರ್ಥ್ಯ ಹೊಂದಿದ್ದಾನೆ. ಸಮಿತಿ ಮೂರು ವರ್ಷಗಳ ಸಮಯ ನಿರ್ಧಾರ ಮಾಡಿದ್ದರೂ ಊರಿನ ಎಲ್ಲ ಭಕ್ತರ ಪಾಲ್ಗೊಳ್ಳುವಿಕೆಯಿಂದ ಶ್ರೀಕೃಷ್ಣ ಎರಡು ವರ್ಷದ ಅವಧಿಯಲ್ಲಿ ಅಲ್ಪವೂ ಲೋಪವಿಲ್ಲದೆ ಪೂರೈಸುವಂತೆ ಮಾಡುತ್ತಾನೆ ಎಂದು ಸ್ವಾಮೀಜಿ ನುಡಿದರು.
ಬ್ರಹ್ಮಶ್ರೀ ವೇದಮೂರ್ತಿ ವರ್ಕಾಡಿ ದಿನೇಶ್ ಕೃಷ್ಣ ತಂತ್ರಿ ನೇತೃತ್ವದಲ್ಲಿ ಪ್ರತಿಷ್ಠೆ ನಡೆಯಿತು. ಕಣಂತೂರು ವೈದ್ಯನಾಥ ಕ್ಷೇತ್ರದ ಆಡಳಿತ ಮೊಕ್ತಸರ ದೇವಿಪ್ರಸಾದ್ ಪೊಯ್ಯತ್ತಾಯ, ಅರ್ಚಕ ವಿಷ್ಣುಪ್ರಸಾದ್ ಭಟ್, ಸತೀಶ್ ಆಳ್ವ ಮಡ್ಡಬೀಡು, ಸೋಮನಾಥ ಕಾರಂತ, ಶ್ರೀ ಗೋಪಾಲಕೃಷ್ಣ ದೇವರ ರಕ್ಷಾ ಕಮಿಟಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಊರ ಪರವೂರ ಹತ್ತು ಸಮಸ್ತರು, ಪಾತೂರುಬೀಡು ಕುಶಲ ಕುಮಾರ್ ಪಾತುರಾಯ ಕೊಡ್ಲಮೊಗರು, ಕೊಂಡೆವೂರು ಅನಂತ ಪದ್ಮನಾಭ ದೇವಸ್ಥಾನದ ಆಡಳಿತ ಮೊಕೇಸರ ಐತಪ್ಪ ಶೆಟ್ಟಿ ದೇವಂದಪದ್ಪು, ನಾರಾಯಣ ಕೊಣಾಜೆ, ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸುಧಾಕರ್ ಕೆ. ನಿರೂಪಿಸಿದರು. ಶಶಿಕಿರಣ್ ಭಟ್ ವಂದಿಸಿದರು.