ಮಂಗಳೂರು, ಸೆ. 07 (DaijiworldNews/TA): ಸುರತ್ಕಲ್ ಪರಿಸರದಲ್ಲಿ ನಡೆದಿದೆ ಎನ್ನಲಾದ ಕಳ್ಳತನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಜೊತೆ ಸ್ಥಳೀಯರಲ್ಲಿ ಭೀತಿಗೆ ಕಾರಣವಾಗಿದೆ.

ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ರಾತ್ರಿ ವೇಳೆ ಮಾರಕಾಯುಧ ಹಿಡಿದು ದರೋಡೆಗೆ ಬಂದಿರುವುದು ಸಿಸಿಟಿವಿ ಫೂಟೇಜ್ ನಲ್ಲಿ ಬೆಳಕಿಗೆ ಬಂದಿದೆ. ಶುಕ್ರವಾರ ತಡ ರಾತ್ರಿ ವೇಳೆ ಮುಸುಕು ಧರಿಸಿ ಮಾರಾಕ ಆಯುಧದೊಂದಿಗೆ ಬಂದಿದ್ದ ಇಬ್ಬರು ಕಳ್ಳರ ವೀಡಿಯೋ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.