ಕಾಸರಗೋಡು, ಸೆ. 03 (DaijiworldNews/AK):ಆಟೋರಿಕ್ಷಾದಲ್ಲಿ ಸಾಗಿಸುತಿದ್ದ 18.240 ಗ್ರಾಂ. ಎ ಡಿ. ಎಂ. ಎ ಮಾದಕ ವಸ್ತು ಸಹಿತ ಓರ್ವನನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೊಡಿಯಮ್ಮೆ ಪೂಕಟ್ಟೆ ನಿವಾಸಿ ಎಂ ಅಬ್ದುಲ್ ಅಜೀಜ್ (42)ಬಂಧಿತ ಆರೋಪಿಯಾಗಿದ್ದಾನೆ. ಸಾಗಾಟಕ್ಕೆ ಬಳಸಿದ ಆಟೋ ರಿಕ್ಷಾ ವಶಕ್ಕೆ ಪಡೆಯಲಾಗಿದೆ. ಮಂಗಳವಾರ ರಾತ್ರಿ ಕೊಡಿಯಮ್ಮೆಯಲ್ಲಿ ವಾಹನ ತಡೆದು ತಪಾಸಣೆ ನಡೆಸಿ ವಿಚಾರಣೆ ನಡೆಸುವಾಗ ಮಾದಕ ವಸ್ತು ಸಾಗಾಟ ಪತ್ತೆಯಗಿದೆ.
ಪೊಲೀಸರನ್ನು ಕಂಡಾಗ ಆರೋಪಿ ರಿಕ್ಷಾ ಬಿಟ್ಟು ಪರಾರಿಯಾಗಲೆತ್ನಿಸಿದ್ದನು. ಇದರಿಂದ ಸಂಶಯಗೊಂಡ ಪೊಲೀಸರು ಆರೋಪಿಯನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ.