ಮಂಗಳೂರು, ಸೆ. 03 (DaijiworldNews/AA): ಗೋಧಿ ಸಾಗಿಸುತ್ತಿದ್ದ ಲಾರಿಯೊಂದು ಸುರತ್ಕಲ್ ಸಮೀಪ ಹೆದ್ದಾರಿಯಲ್ಲಿ ಪಲ್ಟಿಯಾಗಿ, ಅದರಲ್ಲಿದ್ದ ಲಕ್ಷಾಂತರ ಮೌಲ್ಯದ ಗೋಧಿ ರಸ್ತೆಗೆ ಚೆಲ್ಲಿದ ಘಟನೆ ಸೆಪ್ಟೆಂಬರ್ 2ರಂದು ನಡೆದಿದೆ.

ಮುಂದಿನಿಂದ ಸಾಗುತ್ತಿದ್ದ ಕಾರೊಂದು ಸೂರಜ್ ಹೋಟೆಲ್ ಬಳಿ ತಿರುವು ಪಡೆಯಲು ನಿಧಾನಗೊಳಿಸಿದಾಗ ಈ ಅಪಘಾತ ಸಂಭವಿಸಿದೆ. ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದ ಲಾರಿ ಚಾಲಕ, ವಾಹನವನ್ನು ಬದಿಗೆ ತಿರುಗಿಸಿದ್ದಾನೆ. ಈ ವೇಳೆ ಲಾರಿಯು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.
ಗೋಧಿ ರಸ್ತೆಗೆ ಚೆಲ್ಲಿ ಲಕ್ಷಾಂತರ ರೂ. ನಷ್ಟವುಂಟಾಗಿದೆ. ಜೆಸಿಬಿ ಬಳಸಿ ಲಾರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲಾಯಿತು.