ಸುಳ್ಯ, ಸೆ. 01 (DaijiworldNews/TA): ಅರಂತೋಡು ಗ್ರಾಮದ ಅಡ್ತಲೆಯಲ್ಲಿ ತೋಟಗಳಿಗೆ ಕಾಡಾನೆಗಳ ದಾಳಿ ಮುಂದುವರಿದಿದ್ದು, ಬೆಳೆ ನಾಶವಾದ ಘಟನೆ ನಡೆದಿದೆ. ರಾತ್ರಿ ಕಾಡಾನೆಗಳು ತೋಟಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿದೆ.

ಅಡ್ತಲೆ ಯಲ್ಲಿ ದಿನಕೊಂದು ಕಡೆ ಸತತವಾಗಿ ಮೂರು ನಾಲ್ಕು ತಿಂಗಳುಗಳುಗಳಿಂದ ಆನೆ ದಾಳಿ ಮಾಡಿ ಕೃಷಿ ನಾಶ ಮಾಡುತ್ತಿವೆ. ಅಡ್ತಲೆ ಯ ಕಿನಾಲ ಮೋಹನ್ ಅವರ ಆನೆ ಓಡಿಸುವ ಯಂತ್ರದ ಹತ್ತಿರ ಮಾತ್ರ ಬಾರದೆ , ತೋಟದ ಎಲ್ಲಾ ಕಡೆ ಒಡಾಡಿ ಒಂಟಿ ಸಲಗ ಬೆಳೆ ನಾಶ ಮಾಡಿದೆ. ಗುರುಚಾರ ಗಣೇಶ್ ಮಾಸ್ತರ್ ಅಡ್ತಲೆ, ಪ್ರದೀಪ್ ಅಡ್ತಲೆ, ಪ್ರಭಾಕರ ಅಡ್ತಲೆ, ಗಿರೀಶ್ ಅಡ್ತಲೆ, ಅವರ ತೋಟಗಳಿಗೆ ದಾಳಿ ನಡೆಸಿದ ಕಾಡಾನೆಗಳು ಅಡಿಕೆ,ತೆಂಗು ಬಾ ಬಾಳೆ ಇತರ ಬೆಳೆಗಳನ್ನು ನಾಶಪಡಿಸಿವೆ.