ಮಂಗಳೂರು, ಆ. 31 (DaijiworldNews/AA): ತಾಲೂಕಿನ ಬೊಲ್ಪುಗುಡ್ಡೆ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಜುಗಾರಿ ಅಡ್ಡೆಗೆ ಕಾವೂರು ಠಾಣೆಯ ಪೊಲೀಸರು ದಾಳಿ ನಡೆಸಿದ್ದು, 17 ಮಂದಿಯನ್ನು ಬಂಧಿಸಿರುವ ಘಟನೆ ಆ. 30ರಂದು ತಡರಾತ್ರಿ ನಡೆದಿದೆ.

ಬಂಧಿತರನ್ನು ದೇರೆಬೈಲ್ ಕೊಂಚಾಡಿಯ ದಿಕ್ಷಿತ್ (31), ದಯಾನಂದ (40), ರಾಘವೇಂದ್ರ (41),ಉಮೇಶ್ (41), ಗೌತಮ್ (32), ಯಯ್ಯಾಡಿಯ ವೈಶಾಖ್ ಶೆಟ್ಟಿ (25), ಫರಂಗಿಪೇಟೆಯ ಪ್ರವೀಣ್ ಕುಮಾರ್ (40), ಕಾಪುವಿನ ಶಾಹುಲ್ ಹಮೀದ್ (50), ಬಜಪೆಯ ತಿಲಕ್ ರಾಜ್ (31), ವಾಮಂಜೂರಿನ ಜಯಾನಂದ ಎಸ್ (44), ಕೂಳೂರು ನಿವಾಸಿ ಲಾರೆನ್ಸ್ ರಾಜಾ ಡಿ'ಸೋಜಾ (48), ಹೊಯ್ಗೆ ಗದ್ದೆ ಉಲ್ಲಾಳ ನಿವಾಸಿ ಇನಸ್ ಡಿಸೋಜಾ, ಮುಹಮ್ಮದ್ ಅಶ್ರಫ್, ಪೆರ್ಮನೂರು ನಿವಾಸಿ ಮೊಹಮ್ಮದ್ ಫಯಾಜ್ (42), ಉಲ್ಲಾಳ ನಿವಾಸಿ ಮುಸ್ತಾಫಾ(61), ಅಡಮ್ ಕುದ್ರು ಪಡಪು ನಿವಾಸಿ ವಿನ ಸುನೀಲ್ ಡಿ'ಸೋಜಾ (41), ತಮಿಳುನಾಡಿನ ರಾಮನಾಡುನಿವಾಸಿ ಕಣ್ಣನ್ (42) ಎಂದು ಗುರುತಿಸಲಾಗಿದೆ.
ದಾಳಿಯ ಸಮಯದಲ್ಲಿ ಬಂಧಿತರಿಂದ 1,92,000 ರೂ. ನಗದು ಮತ್ತು 18 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಸುಮಾರು 4,00,000 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳು, ಮನೆಯ ಮಾಲೀಕರು ಮತ್ತು ಬಾಡಿಗೆದಾರರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 78 ಮತ್ತು ಭಾರತೀಯ ನ್ಯಾಯ ಸಂಹಿತೆ, 2023 ರ ಸೆಕ್ಷನ್ 112 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಎಸಿಪಿ ಶ್ರೀಕಾಂತ ಕೆ. ಅವರ ಮಾರ್ಗದರ್ಶನದಲ್ಲಿ ಕಾವೂರು ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನ ಬಿರಾದಾರ್ ನೇತೃತ್ವದ ತಂಡ ದಾಲಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿ ಚಂದ್ರು, ರೇಜಿ, ದಾಮೋದರ, ಹಾಲೇಶ್ ಮತ್ತು ಪೊಲೀಸ್ ಠಾಣಾ ಸಿಬ್ಬಂದಿಗಳಾದ ಎಎಸ್ಐ ಜಯರಾಮ್, ಮಂಜುನಾಥ, ನಾಗರಾಜ್ ಮತ್ತು ಇತರರ ಸಹಕಾರದೊಂದಿಗೆ ನಡೆಸಲಾಯಿತು.