ಉಳ್ಳಾಲ, ಆ. 26 (DaijiworldNews/TA): ಅಸೈಗೋಳಿ ಕರ್ನಾಟಕ ಮೀಸಲು ಪೊಲೀಸ್ ಪಡೆಯ ಹೆಡ್ ಕಾನ್ಸ್ಟೇಬಲ್ ಪೊಲೀಸ್ ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಆಗಸ್ಟ್ 25ರಂದು ರಾತ್ರಿ ಸಂಭವಿಸಿದೆ.

ಬಾಗಲಕೋಟೆಯ ಸಂಜೀವ ರಾಥೋಡ್ (38) ಮೃತರು. ಅವರ ಪತ್ನಿ ಮತ್ತು 3 ಮಕ್ಕಳು ರವಿವಾರ ಉತ್ತರ ಕರ್ನಾಟಕಕ್ಕೆ ತೆರಳಿದ್ದರು. ಕುಟುಂಬ ಸದಸ್ಯರೊಂದಿಗೆ ಊರಿಗೆ ಹೋಗಲು ರಜೆ ಸಿಗದೆ ನೊಂದು ಆತ್ಮಹತ್ಯೆಗೈದಿರುವ ಸಾಧ್ಯತೆ ಇದೆ ಎಂದು ಅವರ ನಿಕಟವರ್ತಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.