ಕಾಸರಗೋಡು, ಆ. 26 (DaijiworldNews/AA): ಮಕ್ಕಳು ಸಂತೋಷವಾಗಿದ್ದರೆ, ಇಡೀ ಕುಟುಂಬ ಸಂತೋಷ, ನೆಮ್ಮದಿಯಿಂದ ಕೂಡಿರುತ್ತದೆ. ಆದರೆ ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾದರೆ, ಪೋಷಕರು ಆತಂಕಕ್ಕೊಳಗಾಗುತ್ತಾರೆ. ಕಾಸರಗೋಡಿನ ಬೇಳ ನಿವಾಸಿಯಾದ ಜೇಮ್ಸ್ ಮತ್ತು ಶರ್ಮಿಳಾ ದಂಪತಿಗೂ ಇದೇ ಪರಿಸ್ಥಿತಿ ಎದುರಾಗಿದೆ. ಅವರ 1 ವರ್ಷದ 10 ತಿಂಗಳ ಮಗಳು ಬೇಬಿ ಸಿಯೋನಾ ವಿಕ್ಟರ್ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಪ್ರಾರಂಭದಲ್ಲಿ ಸಿಯೋನಾಗೆ ಶ್ರವಣ ಶಕ್ತಿ ಸಾಮಾನ್ಯವಾಗಿಯೇ ಇತ್ತು. ಆದರೆ ಹಂತಹಂತವಾಗಿ ಆಕೆ ಶ್ರವಣ ಶಕ್ತಿಯನ್ನು ಕಳೆದುಕೊಂಡರು. ಅನೇಕ ವೈದ್ಯಕೀಯ ತಪಾಸಣೆಗಳ ನಂತರ, ಮಗುವು 'ಬೈಲ್ಯಾಟರಲ್ ಪ್ರೌಫೌಂಡ್ ಹಿಯರಿಂಗ್ ಲಾಸ್' (bilateral profound hearing loss) ಎಂಬ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಜ್ಞರು ತಿಳಿಸಿದರು. ಹಿಯರಿಂಗ್ ಏಡ್ಗಳಿಂದ ಯಾವುದೇ ಸುಧಾರಣೆ ಕಂಡುಬಂದಿಲ್ಲ. ವೈದ್ಯರು ಈಗ ಶ್ರವಣ ಶಕ್ತಿ ಸುಧಾರಣೆಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ (Cochlear Implant surgery)ಹಾಗೂ ನಂತರ ಆಡಿಟರಿ ವರ್ಬಲ್ ಥೆರಪಿ(auditory verbal therapy) ಶಿಫಾರಸ್ಸು ಮಾಡಿದ್ದಾರೆ. ಈ ಚಿಕಿತ್ಸೆಯ ಒಟ್ಟು ವೆಚ್ಚ ಸುಮಾರು 10 ಲಕ್ಷ ರೂಪಾಯಿ ತಗುಲಲಿದೆ.
ಮಗುವಿನ ತಂದೆ ಜೇಮ್ಸ್ ಕೇಬಲ್ ಟಿವಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಶರ್ಮಿಳಾ ಗೃಹಿಣಿ. ಅವರಿಗೆ ಇನ್ನೂ ಇಬ್ಬರು ಶಾಲೆಗೆ ಹೋಗುವ ಮಕ್ಕಳು ಇದ್ದಾರೆ. ಈಗಾಗಲೇ ಈ ಕುಟುಂಬಕ್ಕೆ ದಿನನಿತ್ಯದ ಖರ್ಚುಗಳನ್ನು ನಿರ್ವಹಿಸುವುದು ಸವಾಲಾಗಿದೆ. ಈ ಮಧ್ಯೆ ಮಗುವಿನ ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಕುಟುಂಬಕ್ಕೆ ಸವಾಲಾಗಿದೆ.
ಈ ಹಿನ್ನೆಲೆಯಲ್ಲಿ, ಜೇಮ್ಸ್ ಮತ್ತು ಶರ್ಮಿಳಾ ಸಹೃದಯರಾದ ದಾನಿಗಳ ಸಹಾಯಕ್ಕಾಗಿ ವಿನಂತಿ ಮಾಡಿದ್ದಾರೆ. ನಿಮ್ಮ ಸಹಾಯದಿಂದ ಸಿಯೋನಾಳಿಗೆ ಶ್ರವಣ ಶಕ್ತಿ ಹಾಗೂ ಮಾತನಾಡುವ ಶಕ್ತಿ ಸುಧಾರಣೆಗೊಂಡು ಆಕೆಗೆ ಹೊಸ ಜೀವನ ದೊರೆಯಲಿದೆ.
ಸಹಾಯ ಮಾಡಲು ಬಯಸುವವರು ತಮ್ಮ ಕೊಡುಗೆಯನ್ನು ಈ ಕೆಳಗಿನ ಖಾತೆಗೆ ನೇರವಾಗಿ ಕಳುಹಿಸಬಹುದು.
ಖಾತೆ ವಿವರಗಳು:
ಹೆಸರು: ಮಾರಿಯಾ ಶರ್ಮಿಳಾ ಕ್ರಾಸ್ತಾ (ತಾಯಿ)
ಖಾತೆ ಸಂಖ್ಯೆ: 40415101047868
ಬ್ಯಾಂಕ್: ಕೇರಳ ಗ್ರಾಮೀಣ ಬ್ಯಾಂಕ್, ಪೆರ್ಮುಡೆ ಶಾಖೆ
ಐಎಫ್ಎಸ್ಸಿ ಕೋಡ್: KLGB004151
ಸಂಪರ್ಕ ಸಂಖ್ಯೆ: +91 86060 13637