ಸುಳ್ಯ, ಆ. 26 (DaijiworldNews/TA): ತಾಲೂಕಿನ ಅರಂತೋಡು ಗ್ರಾಮದ ಮೇಲಡ್ತಲೆ ಸುಶ್ಮಿತಾ ಎಂ.ಎ ಗಡಿ ಭಾರತೀಯ ಭದ್ರತಾ ಪಡೆಗೆ ಆಯ್ಕೆಗೊಂಡಿದ್ದಾರೆ ಹಾಗೂ ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸುವ ಎಸ್.ಎಸ್.ಸಿ ಜಿ.ಡಿ ಪರೀಕ್ಷೆಯಲ್ಲಿ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದಾರೆ.

ಇವರು ಅರಂತೋಡು ಗ್ರಾಮದ ಅಡ್ತಲೆ ದಿ.ನಾಗಪ್ಪ ಗೌಡ ಎಂ.ಎಂ ಮತ್ತು ಜಾನಕಿ ದಂಪತಿಯ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಮರ್ಕಂಜ, ಪಿ.ಯು.ಸಿಯನ್ನು ಎನ್.ಎಂ.ಪಿ.ಯು ಅರಂತೋಡಿನಲ್ಲಿ ಪೂರೈಸಿ , ಸುಳ್ಯದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಪುತ್ತೂರಿನ ತರಬೇತಿ ಅಕಾಡೆಮಿಯೊಂದರಲ್ಲಿ ಬಿ.ಎಸ್.ಎಫ್ ಪರೀಕ್ಷೆಯ ಕೋಚಿಂಗ್ ಪಡೆದಿದ್ದಾರೆ.