ಬಂಟ್ವಾಳ , ಆ. 22 (DaijiworldNews/AK): ಜನಪ್ರಿಯ ಫೌಂಡೇಶನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಾಸನ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮಂಗಳೂರಿನಲ್ಲಿರುವ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯು ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಉತ್ತಮ ಆರೋಗ್ಯ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಇದೀಗ ವಿಟ್ಲದಲ್ಲಿ ಮೊಟ್ಟ ಮೊದಲ ಬಾರಿಗೆ ಜನಪ್ರಿಯ ಹೆಲ್ತ್ ಸೆಂಟರ್ ವಿಟ್ಲದ ಬೊಬ್ಬೆಕೇರಿಯಲ್ಲಿ ಆಗಸ್ಟ್ 24ರ ಭಾನುವಾರ ಉದ್ಘಾಟನೆಗೊಳ್ಳಲಿದೆ ಎಂದು ಮಂಗಳೂರು ಜನಪ್ರಿಯ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯ ಸಿಇಓ ಡಾ. ಕಿರಾಶ್ ಪರ್ತಿಪ್ಪಾಡಿ ತಿಳಿಸಿದರು.

ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೂಲತಃ ವಿಟ್ಲ ಕಂಬಳಬೆಟ್ಟು ನಿವಾಸಿ ಬದ್ರಿಯಾ ಮನೆತನದ ಡಾ. ವಿ.ಕೆ ಅಬ್ದುಲ್ ಬಶೀರ್ ಅವರ ನೇತೃತ್ವದಲ್ಲಿ ವೈದ್ಯಕೀಯ ಸೇವೆಯ ಜೊತೆಗೆ ಜನಪ್ರಿಯ ಫೌಂಡೇಶನ್ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ 2021 ರಿಂದ ವಿಟ್ಲದ ಕಂಬಳಬೆಟ್ಟುವಿನಲ್ಲಿ ಜನಪ್ರಿಯ ಸೆಂಟ್ರಲ್ ಸ್ಕೂಲ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಗ್ರಾಮೀಣ ಭಾಗದ ಜನತೆಗೆ ಇನ್ನಷ್ಟು ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ವಿಟ್ಲದ ಬೊಬ್ಬೆಕೇರಿ ಪಾಣೆಮಜಲು ಎಂಬಲ್ಲಿರುವ ಹರಿಹರ ಕಾಂಪ್ಲೆಕ್ಸ್ ನಲ್ಲಿ ಸುಸಜ್ಜಿತ ಹಾಗೂ ನುರಿತ ವೈದ್ಯರನ್ನೊಳಗೊಂಡ ಜನಪ್ರಿಯ ಹೆಲ್ತ್ ಸೆಂಟರ್ ಇದರ ಲೋಕಾರ್ಪಣ ಕಾರ್ಯಕ್ರಮವು ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದು, ಧಾರ್ಮಿಕ ಪಂಡಿತರಾದ ಅಲ್ ಹಾಜಿ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಹಾಗೂ ವಿಟ್ಲ ಶೋಕ ಮಾತಾ ಇಗರ್ಜಿಯ ಧರ್ಮಗುರುಗಳಾದ ಫಾ. ಐವನ್ ಮೈಕಲ್ ರೊಡ್ರಿಗಸ್ ಸಂದೇಶ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಜನಪ್ರಿಯ ಫೌಂಡೇಶನ್ ಇದರ ಅಧ್ಯಕ್ಷರಾದ ಡಾ.ವಿ.ಕೆ ಅಬ್ದುಲ್ ಬಶೀರ್ ಅವರು ವಹಿಸಲಿದ್ದಾರೆ.
ಜನಪ್ರಿಯ ಹೆಲ್ತ್ ಸೆಂಟರ್ ಅನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ. ಸ್ಕ್ಯಾನಿಂಗ್ ಮತ್ತು ಎಕ್ಸ್ ರೇ ಕೊಠಡಿಯನ್ನು ಮಾಜಿ ಸಚಿವರಾದ ಬಿ ರಮಾನಾಥ ರೈ ಅವರು ಉದ್ಘಾಟಿಸಲಿದ್ದಾರೆ.
ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಪ್ರಯೋಗಾಲಯವನ್ನು ಯು ಟಿ ಇಫ್ತಿಕರ್ ಫರೀದ್ ಅಲಿ ಅವರು ಉದ್ಘಾಟಿಸಲಿದ್ದಾರೆ. ಔಷಧಾಲಯವನ್ನು ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಅಶೋಕ್ ರೈ ಅವರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿಶೇಷವಾಗಿ ಉದ್ಘಾಟನಾ ಸಮಾರಂಭ ಪ್ರಯುಕ್ತ ಅಂದೇ ವಿಟ್ಲ ಅಸುಪಾಸಿನ ಜನರಿಗಾಗಿ ಉಚಿತ ಅರೋಗ್ಯ ತಪಾಸಣಾ ಶಿಬಿರ ಕೂಡ ಹಮ್ಮಿಕೊಳ್ಳಲಾಗಿದೆ. ಈ ಅರೋಗ್ಯ ಶಿಬಿರದಲ್ಲಿ ಇಸಿಜಿ, ಸಕ್ಕರೆಯ ರಕ್ತಪರೀಕ್ಷೆ, ರಕ್ತದೊತ್ತಡ ಹಾಗೂ ವೈದ್ಯರ ಸಲಹೆಗಳು ಉಚಿತವಾಗಿರುತ್ತದೆ. ತಜ್ಞ ವೈದ್ದರುಗಳಾದ ಮೂಳೆತಜ್ಞರು, ಜನರಲ್ ಮೆಡಿಸಿನ್, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ನರರೋಗ ತಜ್ಞರು, ಕಿವಿ ಮೂಗು ಗಂಟಲು ತಜ್ಞರು ಗಳಾದ ವೈದ್ಯರ ತಂಡ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ನಿರ್ದೇಶಕ ನೌಶೀನ್ ಬದ್ರಿಯಾ, ಮಂಗಳೂರು ಜನಪ್ರಿಯ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯ ಜನರಲ್ ಮ್ಯಾನೇಜರ್ ಇಕ್ಬಾಕ್ ವಿಟ್ಲ, ಜನಪ್ರಿಯ ಹೆಲ್ತ್ ಸೆಂಟರ್ ವೈದ್ಯ ಡಾ. ಬದ್ರುದ್ದೀನ್, ಜನಪ್ರಿಯ ಫೌಂಡೇಶನ್ ಜನರಲ್ ಮ್ಯಾನೇಜರ್ ಮೋನಿಸ್ ಅಲಿ, ಜನಪ್ರಿಯ ಆಸ್ಪತ್ರೆಯ ಮಾರ್ಕೆಟಿಂಗ್ ಮುಖ್ಯಸ್ಥ ಉಮೇಶ್ ಗೌಡ, ಪಿ ಆರ್ ಓ ಬಾತೀಷ್ ಅಳಕೆಮಜಲು ಉಪಸ್ಥಿತರಿದ್ದರು.