ಉಡುಪಿ, ಆ. 22 (DaijiworldNews/AA): ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕಾ ದೋಣಿ ಮಗುಚಿ ಬಿದ್ದು ಮೀನುಗಾರನೊಬ್ಬ ಸಾವನ್ನಪ್ಪಿದ ಘಟನೆ ಸಾಸ್ತಾನ ಕೋಡಿತಲೆ ಬಳಿ ಆಗಸ್ಟ್ 22 ರಂದು ಸಂಭವಿಸಿದೆ.

ಮೃತರನ್ನು ಶರತ್ ಎಂದು ಗುರುತಿಸಲಾಗಿದೆ.
ಮೂವರು ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಬಲವಾದ ಅಲೆಗಳಿಂದಾಗಿ ಅವರ ದೋಣಿ ಮಗುಚಿ ಬಿದ್ದಿದೆ. ಮೂವರ ಪೈಕಿ ಇಬ್ಬರು ಮೀನುಗಾರರಾದ ಅಕ್ಷಯ್ ಖಾರ್ವಿ ಮತ್ತು ಮಂಜುನಾಥ ಖಾರ್ವಿ ಸುರಕ್ಷಿತವಾಗಿ ಈಜಿ ದಡ ಸೇರಿದ್ದು, ಶರತ್ ಈ ದುರಂತದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.