ಮಂಗಳೂರು, ಆ. 22 (DaijiworldNews/TA): ಮಂಗಳೂರಿನಲ್ಲಿ ಜಾಹೀರಾತು, ಮುದ್ರಣ ವಿನ್ಯಾಸ ಮತ್ತು ಸಾಮಾಜಿಕ ಜಾಲತಾಣಗಳ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ತರ್ಜನಿ ಕಮ್ಯುನಿಕೇಷನ್ಸ್ ಸಂಸ್ಥೆ ವಿನ್ಯಾಸಗೊಳಿಸಿದ ಮಂಗಳೂರಿನ "ವಿಶ್ವಕೊಂಕಣಿಕೇಂದ್ರ" ವತಿಯಿಂದ ಪ್ರಕಟಿಸಲ್ಪಟ್ಟ "ಟೆಂಪಲ್ಸ್ಆಫ್ಗೋವಾ"ದಕಾಫಿಟೇಬಲ್ ಪುಸ್ತಕವನ್ನು ಗೋವಾ ಮುಖ್ಯಮಂತ್ರಿಡಾ. ಪ್ರಮೋದ್ ಸಾವಂತ್ರವರುದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಮರ್ಪಿಸಿದರು.

ಈ ಕಾಫಿಟೇಬಲ್ ಪುಸ್ತಕದ ಪರಿಕಲ್ಪನೆ, ವಿನ್ಯಾಸ, ವಿಷಯ ಸಂಗ್ರಹಣೆ ಮತ್ತು ಮುದ್ರಣದವರೆಗಿನ ಜವಾಬ್ದಾರಿಯನ್ನು ತರ್ಜನಿ ಕಮ್ಯುನಿಕೇಷನ್ಸ್ ಸಂಸ್ಥೆ ನಿರ್ವಹಿಸುವ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಚೇಯರ್ಮೆನ್ ಸಂಜಯ ಪ್ರಭು ಅವರು ಇದೊಂದು ನಮ್ಮ ಸಂಸ್ಥೆಗೆ ಗೌರವದ ಜೊತೆಗೆ ಹೆಮ್ಮೆಯೆನಿಸುತ್ತಿದೆ ಎಂದರು. ಮ್ಯಾನೇಜಿಂಗ್ಡೈರೆಕ್ಟರ್ ಶೇಷಗಿರಿಕೆ.ಜಿ. ಅವರುನಮ್ಮ ಸಂಸ್ಥೆಯ ನೇತೃತ್ವದಲ್ಲಿ ಪ್ರಕಟಗೊಂಡ "ಟೆಂಪಲ್ಸ್ಆಫ್ಗೋವಾ"ದಕಾಫಿಟೇಬಲ್ ಪುಸ್ತಕ ಪ್ರಧಾನಮಂತ್ರಿಯವರ ತನಕ ತಲುಪಿದ್ದು, ನಮ್ಮ ಸಂಸ್ಥೆಯ ಯಶಸ್ಸನ್ನು ತೋರಿಸುತ್ತಿದೆ ಎಂದರು.
ಮಂಗಳೂರಿನ "ವಿಶ್ವಕೊಂಕಣಿಕೇಂದ್ರ" ವತಿಯಿಂದ ಪ್ರಕಟಿಸಲ್ಪಟ್ಟ ಈ ಗಮನಾರ್ಹ ಪುಸ್ತಕದ ಸಂಪಾದಕಿಯಾಗಿ ತರ್ಜನಿ ಕಮ್ಯುನಿಕೇಷನ್ಸ್ ಸಂಸ್ಥೆಯ ಎಡಿಟರ್ ಡಾ. ಭಾರತಿ ಶೇವಗೂರು ಕಾರ್ಯ ನಿರ್ವಹಿಸಿದ್ದಾರೆ. ಈ ಪುಸ್ತಕದಲ್ಲಿರುವ ಸುಂದರ ಚಿತ್ರಗಳ ಫೋಟೋಗ್ರಾಫಿಯನ್ನು ಮಂಗಳೂರಿನ ಅಣ್ಣು ಮಂಗಳೂರು ಮಾಡಿದ್ದಾರೆ.