ಕುಂಬಳೆ, ಆ. 22 (DaijiworldNews/TA): ರಾಷ್ಟ್ರೀಯ ಹೆದ್ದಾರಿ ಕುಂಬಳೆಯಲ್ಲಿ ಟೋಲ್ ಗೇಟ್ ನಿರ್ಮಾಣ ಕಾಮಗಾರಿ ಆಗಸ್ಟ್ 20ರಂದು ಆರಂಭಗೊಂಡಿತು. ಟೋಲ್ ಬೂತ್ ವಿರೋಧಿ ಕ್ರಿಯಾ ಸಮಿತಿ ನಾಯಕರು ಮತ್ತು ಸ್ಥಳೀಯರು ಸೇರಿ ಟೋಲ್ ಬೂತ್ ಕಾಮಗಾರಿ ಸ್ಥಳಕ್ಕೆ ಪ್ರತಿಭಟನಾ ಜಾಥಾನಡೆಸಿ ಕಾಮಗಾರಿ ತಡೆದರು.

ಕರ್ತವ್ಯ ನಿರತ ಕಾರ್ಮಿಕರನ್ನು ಕೆಲಸ ತಡೆದು ಮರಳಿಸಿದ್ದಲ್ಲದೇ ಅವರು ತೋಡಿದ್ದ ಹೊಂಡಗಳನ್ನು ಅವರಿಂದಲೇ ಮುಚ್ಚಿಸಲಾಗಿದೆ. ಕ್ರಿಯಾ ಸಮಿತಿ ನಾಯಕರಾದ ಅಶ್ರಫ್ ಕಾರ್ಲೆ, ಎ. ಕೆ. ಆರಿಫ್, ಅನ್ವರ್ ಆರಿಕ್ಕಾಡಿ, ಲತೀಫ್ ಕುಂಬಳೆ, ಸಿ. ಎ. ಸುಬೈರ್ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು. ಇದೀಗ ಟೋಲ್ ಗೇಟ್ ಆರಂಭಿಸುವ ಬಗ್ಗೆ ಹೋರಾಟಕ್ಕೆ ನಾಗರಿಕರು ಮುಂದಾಗಿದ್ದಾರೆ.