ಉಡುಪಿ, ಆ. 21 (DaijiworldNews/TA): ಬ್ರಹ್ಮಾವರ ಠಾಣೆಯಲ್ಲಿ ನಡೆಯುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿಚಾರಣೆ ಹಿನ್ನೆಲೆಯಲ್ಲಿ ಪ್ರದೇಶದ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಅಪಾಯದ ಸಾಧ್ಯತೆಗಳ ನಡುವೆ, ಸ್ಥಳದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಕ್ರಮ ಕೈಗೊಂಡಿದ್ದು, ಬ್ರಹ್ಮಾವರ ಪೊಲೀಸ್ ಠಾಣೆಯ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಈ ನಿಷೇಧಾಜ್ಞೆ ಆ. 21ರ ಮದ್ಯಾಹ್ನದಿಂದ ಆರಂಭಗೊಂಡು, ಆ. 22ರ ಮದ್ಯಾಹ್ನದವರೆಗೆ ಜಾರಿಯಲ್ಲಿ ಇರುತ್ತದೆ. ಈ ಅವಧಿಯಲ್ಲಿ ಯಾವುದೇ ಪ್ರತಿಭಟನೆ, ಸಭೆ, ಮೆರವಣಿಗೆ ಅಥವಾ ಜನ ಸಮಾವೇಶವನ್ನು ತೀವ್ರವಾಗಿ ನಿಷೇಧಿಸಲಾಗಿದೆ. ಸದ್ಯ ಬ್ರಹ್ಮಾವರ ಠಾಣೆ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.