ಸುಳ್ಯ, ಆ. 21 (DaijiworldNews/AK):ಕೇಂದ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಕೇಂದ್ರ ಕಚೇರಿ ವಿಟ್ಲ, ತಾಲೂಕು ಪಂಚಾಯತ್ ಸುಳ್ಯ, ಜಿಲ್ಲಾ ಪಂಚಾಯತ್ ಮಂಗಳೂರು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಕೌಶಲ್ಯ ಸಂವರ್ಧನ ಸಂಸ್ಥೆ ಬೆಂಗಳೂರು ಇವರ ಜಂಟಿ ಸಹಯೋಗದಲ್ಲಿ ಗೇರು ಬೆಳೆ ಉತ್ಪಾದನೆ ಮತ್ತು ವೈಜ್ಞಾನಿಕ ಕೊಯ್ಲು ತಂತ್ರಜ್ಞಾನಗಳ ಬಗ್ಗೆ ಕೃಷಿ ಸಖಿಯರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸುಳ್ಯದ ಮಿನಿ ಸಭಾಂಗಣದಲ್ಲಿ ನಡೆಯಿತು.



ಕೆ. ಇ ಜಯರಾಮ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪುತ್ತೂರಿನ ಕೇಂದ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಜೆ. ದಿನಕರ ಅಡಿಗ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಅಶ್ವತಿ ಚಂದ್ರಕುಮಾರ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ವಿಜ್ಞಾನಿ ಡಾ. ರವಿಪ್ರಸಾದ್ ಮಾತನಾಡಿ, ಗೇರು ಗಿಡಗಳಿಗೆ ಬಾಧಿಸುವ ಕೀಟಗಳು ಹಾಗೂ ಅವುಗಳಿಂದ ರಕ್ಷಣೆ ಪಡೆಯುವ ರೀತಿಯ ಬಗ್ಗೆ ಮಾಹಿತಿಯನ್ನು ನೀಡಿದರು.