ಕಾಸರಗೋಡು, ಆ. 21 (DaijiworldNews/AK):ಜಾನುವಾರು ಸಾಕಾಣಾ ಕೇಂದ್ರದಿಂದ ಮೋಟಾರು ಪಂಪ್ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಕಳವುಗೈದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರನ್ನು ಕಾಸರಗೋಡಿನ ಚಂದೇರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪಿಲಿಕ್ಕೋಡ್ ಕಣ್ಣಾಂಗೈ ನ ಪಿ.ಪ್ರಮೋದ್ ರವರ ಜಾನುವಾರು ಸಾಕಾಣಾ ಕೇಂದ್ರದಿಂದ ಕಳವು ಮಾಡಲಾಗಿತ್ತು. ಬಂಧಿತರನ್ನು ವಿ.ವಿ ಸಜೀಶ್ (36), ವಿ.ನಿತಿನ್ (31), ಎಂ. ರಾಜೇಶ್ (35) ಸಿಎಚ್ ಪ್ರಶಾಂತ್ ( 42), ಸಿ.ವಿ ವಿಜೇಶ್ (34) ಬಂಧಿತ ಆರೋಪಿಗಳು.
ಸುಮಾರು 1.25 ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳನ್ನು ಕಳವು ಮಾಡಲಾಗಿತ್ತು. ಮಾಲಕನ ದೂರಿನಂತೆ ಪೊಲೀಸರು ನಡೆಸಿದ ತನಿಖೆಯಿಂದ ಆರೋಪಿಗಳು ಕಳವುಗೈದ ಸಾಮಾಗ್ರಿಗಳನ್ನು ಗುಜರಿ ಅಂಗಡಿಗಳಿಗೆ ಮಾರಾಟ ಮಾಡಿದ್ದರು. ಇದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.