ಮಂಗಳೂರು, ಆ. 20 (DaijiworldNews/TA): ಪಣಂಬೂರು ಕೈಗಾರಿಕಾ ಪ್ರದೇಶದ ಭಟ್ರ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ ಲಕ್ಷ್ಮಿಬಾಯಿ ಪರತಗೌಡ (49) ಎಂಬವರು ಕಳೆದ ಜೂನ್ 20, 2025 ರಂದು ಕೆಲಸಕ್ಕೆಂದು ಉರ್ವ ಸ್ಕೋರ್ ಕಡೆಗೆ ಹೋಗಿದ್ದು ಮರಳಿ ಬಾರದೆ ಕಾಣೆಯಾಗಿದ್ದಾರೆ. ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗ ಸಾರ್ವಜನಿಕರಿಂದ ಸಹಾಯ ಕೋರುವಂತೆ ಪೊಲೀಸರು ಪ್ರಕಟಣೆ ನೀಡಿದ್ದಾರೆ.

ಲಕ್ಷ್ಮಿಬಾಯಿ ಪರತಗೌಡ ಅವರು ದಿನದ ಪ್ರತಿ ಉರ್ವ ಸ್ಕೋರ್ಗೆ ಕೂಲಿ ಕೆಲಸಕ್ಕಾಗಿ ಹೋಗುವ ಪರಿಪಾಠವಿದ್ದವರು. ಜೂನ್ 20 ರಂದು ಕೂಡ ಎಂದಿನಂತೆ ಹೊರಟು, ನಂತರ ಮನೆಗೆ ಮರಳಿಲ್ಲ. ಅವರ ಪತಿ ಬಸವರಾಜ್ ಪರತಗೌಡ ಅವರು ಪಣಂಬೂರು ಪೊಲೀಸ್ ಠಾಣೆಯಲ್ಲಿ 21-06-2025 ರಂದು ದೂರು ಸಲ್ಲಿಸಿದ್ದರು. ಪ್ರಕರಣವನ್ನು ಅಪರಾಧ ಕ್ರಮಾಂಕ: 64/2025 ಅಡಿಯಲ್ಲಿ ದಾಖಲಿಸಲಾಗಿದೆ.
ಕಾಣೆಯಾದ ಮಹಿಳೆಯ ವಿವರಗಳು :
ಹೆಸರು : ಲಕ್ಷ್ಮಿಬಾಯಿ ಪರತಗೌಡ
ವಯಸ್ಸು: 49 ವರ್ಷ
ಗಂಡನ ಹೆಸರು : ಬಸವರಾಜ್ ಪರತಗೌಡ
ಎತ್ತರ: ಸುಮಾರು 5 ಅಡಿ
ಶರೀರದ ಲಕ್ಷಣ: ದಪ್ಪ ಮೈಕಟ್ಟು, ಕಪ್ಪು ಮೈಬಣ್ಣ, ಬಿಳಿ-ಕಪ್ಪು ಮಿಶ್ರಿತ ತಲೆ ಕೂದಲು
ಧರಿಸಿರುವ ಬಟ್ಟೆ: ಹಳದಿ ಹಾಗೂ ಕೆಂಪು ಬಣ್ಣದ ಸೀರೆ, ಹಸಿರು ಬಣ್ಣದ ರವಿಕೆ, ಕಿವಿಯಲ್ಲಿ ಬೆಂಡೋಲೆ
ಮಾತಿನ ಭಾಷೆ: ಕನ್ನಡ
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ:
ಪಣಂಬೂರು ಪೊಲೀಸ್ ಠಾಣೆ: 0824-2220530
ಮೊಬೈಲ್ ಸಂಖ್ಯೆ: 9480805355, 9480805331
ಮಂಗಳೂರು ನಗರ ಕಂಟ್ರೋಲ್ ರೂಮ್: 0824-2220800
ಈ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ, ಮೇಲ್ಕಂಡ ನಂಬರ್ಗಳಿಗೆ ತಕ್ಷಣವಾಗಿ ಸಂಪರ್ಕಿಸಿ, ಅವರ ಪತ್ತೆಗೆ ಸಹಕರಿಸಲು ಸಾರ್ವಜನಿಕರಿಂದ ಪಣಂಬೂರು ಪೊಲೀಸರು ಮನವಿ ಮಾಡಿದ್ದಾರೆ.