ಕಾಸರಗೋಡು, ಆ. 20 (DaijiworldNews/TA): ಬೇಕಲ ಸಮೀಪದ ಕೋಟಿಕುಳಂ ಎಂಬಲ್ಲಿನ ಜನವಾಸವಿಲ್ಲದ ಮನೆಯ ಕೊಠಡಿಯಲ್ಲಿ ಭಾರೀ ಪ್ರಮಾಣದ ಪ್ರಾಚ್ಯ ವಸ್ತು ಪತ್ತೆಯಾಗಿದೆ.ಕಂಚಿನ ಪಾತ್ರೆಗಳು, ಕಾಲ್ಗೆಜ್ಜೆ , ಖಡ್ಗ ಗಳು ಹಾಗೂ ಇನ್ನಿತರ ವಸ್ತುಗಳು ಪತ್ತೆಯಾಗಿವೆ.



ಕೆಲ ಸಾಮಾಗ್ರಿಗಳಲ್ಲಿ ಅರಬಿ ಅಕ್ಷರಗಳನ್ನು ಪತ್ತೆ ಹಚ್ಚಲಾಗಿದೆ. ಪೊಲೀಸರು ಪ್ರಾಚ್ಯ ವಸ್ತು ಇಲಾಖೆಗೆ ಮಾಹಿತಿ ನೀಡಿದ್ದು, ತನಿಖೆಯ ಬಳಿಕ ನೈಜ ಸ್ಥಿತಿ ಅರಿವಾಗಲಿದೆ. ಮನೆಗೆ ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ.